ಕರ್ನಾಟಕ

karnataka

ETV Bharat / city

ಕೋವಿಡ್ ಸೋಂಕಿತ ಆಸ್ಪತ್ರೆಯಿಂದ ಪರಾರಿ: ಪ್ರಕರಣ ದಾಖಲು - ಕೊರೊನಾ ಪ್ರಕರಣಗಳು

ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸೋಂಕಿತ ವ್ಯಕ್ತಿ ಪರಾರಿಯಾದ ಘಟನೆ ಇಂದು ಜರುಗಿದ್ದು, ಪ್ರಕರಣ ದಾಖಲಾಗಿದೆ.

covid-patient-escape-from-wenlock-hospital
ಕೋವಿಡ್ ಸೋಂಕಿತ ಆಸ್ಪತ್ರೆಯಿಂದ ಪರಾರಿ

By

Published : Jul 5, 2020, 11:28 PM IST

ಮಂಗಳೂರು: ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ.

ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಪುತ್ತೂರು ದರ್ಬೆ ನಿವಾಸಿ ದೇವರಾಜ್ (18) ಪರಾರಿಯಾದ ಯುವಕ. ಕೋವಿಡ್ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ಜು. 1ರಂದು ದೇವರಾಜ್ ಸ್ವತಃ ವೆನ್ಲಾಕ್ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದ. ಇಂದು ವರದಿ ಪಾಸಿಟಿವ್​​ ಬಂದ ಹಿನ್ನೆಲೆ ಬೆಳಗ್ಗೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಂಜೆ ವೇಳೆಗೆ ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆ.

ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಗೆ (ದೂ.ಸಂ.0824-2220518) ಅಥವಾ ಪೊಲೀಸ್ ಕಂಟ್ರೋಲ್ ರೂಂ (ನಂ. 100/ 0824-2220800) ಗೆ ಮಾಹಿತಿ ನೀಡಲು ಕೋರಲಾಗಿದೆ.

ABOUT THE AUTHOR

...view details