ಮಂಗಳೂರು:ವಿದ್ಯಾರ್ಥಿಗಳಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 5 ಶಾಲೆ ಮತ್ತು ಒಂದು ಪಿಯು ಕಾಲೇಜನ್ನು ಬಂದ್ ಮಾಡಲಾಗಿದೆ.
ವಿದ್ಯಾರ್ಥಿಗಳಲ್ಲಿ 5ಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಕಾಣಿಸಿಕೊಂಡರೆ ಆಯಾ ಶಾಲೆಯನ್ನು ನಿರ್ದಿಷ್ಟ ಅವಧಿಗೆ ಭೌತಿಕ ತರಗತಿಗಳನ್ನು ರದ್ದುಪಡಿಸಿ ಆನ್ಲೈನ್ ತರಗತಿ ನಡೆಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಅದರಂತೆ 5 ಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಕಾಣಿಸಿಕೊಂಡ ಶಾಲೆಗಳನ್ನು ನಿರ್ದಿಷ್ಟ ಅವಧಿಗೆ ಬಂದ್ ಮಾಡಲಾಗಿದೆ.
ಮಂಗಳೂರಿನ ಸರ್ಕಾರಿ ಹೈಸ್ಕೂಲ್ ಬೆಂಗ್ರೆ ಕಸಬ, ಕೆನರಾ ಸಿಬಿಎಸ್ಇ ಡೊಂಗರಕೇರಿ, ಅನ್ಸಾರ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಬಜ್ಪೆ, ವ್ಯಾಸ ಮಹರ್ಷಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಮುಲ್ಕಿ, ಸರ್ಕಾರಿ ಪ್ರೌಢಶಾಲೆ ಮುಚ್ಚೂರು ಮತ್ತು ವಿವೇಕಾನಂದ ಪಿಯುಸಿ ಎಡಪದವು ಬಂದ್ ಆಗಿರುವ ಶಿಕ್ಷಣ ಸಂಸ್ಥೆಗಳು.
ಮುಚ್ಚಲಾದ ಶಾಲೆಗಳನ್ನು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡು ಬಂದ್ ಅವಧಿ ಮುಗಿದ ಬಳಿಕ ಪುನಾರಂಭಿಸಲು ಸೂಚಿಸಲಾಗಿದೆ.
(ಇದನ್ನೂ ಓದಿ: ಕೇವಲ 7 ಸಾವಿರ ರೂ. ಸಾಲಕ್ಕೆ ಗಂಡನನ್ನು ಬಿಟ್ಟ ಪತ್ನಿ: ಇಬ್ಬರು ಮಕ್ಕಳು, ಪತಿ ಕಂಗಾಲು!!)