ಕರ್ನಾಟಕ

karnataka

ETV Bharat / city

ಕೋವಿಡ್‌ ಜೊತೆಗಿನ ಹೋರಾಟದಲ್ಲಿ ಗೆಲ್ಲಲಿಲ್ಲ; ಒಂದೇ ದಿನ ಉಸಿರು ನಿಲ್ಲಿಸಿದ್ರು ನೆಲ್ಯಾಡಿಯ ದಂಪತಿ

ಜುಲೈ 4 ರಂದು ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಅಚ್ಚರಿಯೆಂಬಂತೆ ಒಂದೇ ದಿನ ಸಾವನ್ನಪಿದರು.

couple die of same day due to covid
ನೆಲ್ಯಾಡಿಯ ಸೈಂಟ್ ಅಲ್ಫೋನ್ಸಾ ಚರ್ಚ್‌ನ ದಫನ ಭೂಮಿಯಲ್ಲಿ ನಡೆದ ದಂಪತಿ ಅಂತ್ಯಕ್ರಿಯೆ

By

Published : Jul 16, 2021, 3:47 PM IST

ನೆಲ್ಯಾಡಿ: ಕೊರೊನಾ ಸೋಂಕು ತಗುಲಿದ ಕಾರಣ ಕಳೆದ 12 ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಒಂದೇ ದಿನ ಸಾವನ್ನಪಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೈಂಟ್ ಮೇರಿಸ್ ಚರ್ಚ್‌ನ ಧರ್ಮಗುರು ಸೆಬಾಸ್ಟಿಯನ್ ಪುನ್ನತ್ತಾನತ್ತ್ ಅವರ ತಾಯಿ ಮೇರಿ ಪುನ್ನತ್ತಾನತ್ತ್ ಮತ್ತು ಅವರ ತಂದೆ ವರ್ಗೀಸ್ ಪುನ್ನತ್ತಾನತ್ತ್ ಮೃತ ದಂಪತಿ. ಇವರು ನಿನ್ನೆ ಕೇವಲ ಮೂರುವರೆ ಗಂಟೆ ಅಂತರದಲ್ಲಿ ಕೊನೆಯುಸಿರೆಳೆದಿದ್ದಾರೆ.

ನೆಲ್ಯಾಡಿಯ ಸೈಂಟ್ ಅಲ್ಫೋನ್ಸಾ ಚರ್ಚ್‌ನ ದಫನ ಭೂಮಿಯಲ್ಲಿ ನಡೆದ ದಂಪತಿ ಅಂತ್ಯಕ್ರಿಯೆ

ಈ ದಂಪತಿಯನ್ನು ಜುಲೈ 4 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಂಪತ್ಯ ಜೀವನದುದ್ದಕ್ಕೂ ಪರಸ್ಪರ ಅನ್ಯೋನ್ಯವಾಗಿದ್ದ ಇವರು ಸಾವಿನಲ್ಲೂ ಒಂದಾಗಿರುವುದು ವಿಶೇಷ.

ಮೃತರು ಓರ್ವ ಧರ್ಮಗುರುಸಹಿತ ಇಬ್ಬರು ಗಂಡು ಮತ್ತು ಇಬ್ಬರು‌ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರವನ್ನು ನೆಲ್ಯಾಡಿಯ ಸೈಂಟ್ ಅಲ್ಫೋನ್ಸಾ ಚರ್ಚ್‌ನ ದಫನ ಭೂಮಿಯಲ್ಲಿ ಇಂದು ಬೆಳಗ್ಗೆ ನೆರವೇರಿಸಲಾಗಿದೆ.

ABOUT THE AUTHOR

...view details