ಮಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ನಡೆಯುವ ಶುಕ್ರವಾರದ ಪ್ರಾರ್ಥನೆಯನ್ನು ಬೇಗ ಮುಗಿಸಲಾಯಿತು.
ಕೊರೊನಾ ಭೀತಿ: ಪ್ರಾರ್ಥನಾ ಅವಧಿ ಕಡಿಮೆ ಮಾಡಿದ ಮುಸ್ಲಿಂ ಬಾಂಧವರು
ಕೊರೊನಾ ಭೀತಿ ಹಿನ್ನೆಲೆ ದ.ಕ ಜಿಲ್ಲಾಧಿಕಾರಿ ಎಲ್ಲಾ ದೇವಾಲಯ, ಚರ್ಚ್, ಮಸೀದಿಗಳಲ್ಲಿ ಗುಂಪು ಗುಂಪಾಗಿ ಜನ ಸೇರಬಾರದು ಎಂದು ಆದೇಶ ಹೊರಡಿಸಿದ್ದಾರೆ.
ಮುಸ್ಲಿಂ ಬಾಂಧವರಿಂದ ನಮಾಜ್
ನಗರದ ಬಾವುಟ ಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ಪ್ರತಿ ಶುಕ್ರವಾರ ಸಾವಿರಕ್ಕೂ ಅಧಿಕ ಮಂದಿ ಪ್ರಾರ್ಥನೆ ನೆರವೇರಿಸುತ್ತಾರೆ. ಆದರೆ ಇಂದು 100-200 ಮಂದಿ ಮಾತ್ರ ಪ್ರಾರ್ಥನೆ ನೆರವೇರಿಸಿದರು.
ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಪರಿಣಾಮ ಇಂದು ಎಲ್ಲಾ ಮಸೀದಿಗಳಲ್ಲಿಯೂ ಒಂದು ಗಂಟೆಗಳ ಕಾಲ ನಡೆಯುವ ಪ್ರಾರ್ಥನೆಯನ್ನು ದೀರ್ಘಗೊಳಿಸದೆ ಶೀಘ್ರವಾಗಿ ನೆರವೇರಿಸಲಾಯಿತು.