ಬೆಳ್ತಂಗಡಿ: ತಾಲೂಕಿನ ಹೊಸಂಗಡಿ ಸಮೀಪದ ವ್ಯಕ್ತಿಯೊಬ್ಬರು ಕೋವಿಡ್ನಿಂದ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಗೌರವಯುತವಾಗಿ ಬೆಳ್ತಂಗಡಿ ಕೊರೊನಾ ವಾರಿಯರ್ಸ್ ತಂಡ ನೆರವೇರಿಸಿದೆ.
ಸೋಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಕೊರೊನಾ ವಾರಿಯರ್ಸ್ ತಂಡ - ಬೆಳ್ತಂಗಡಿ ತಾಲೂಕಿನ ಹೊಸಂಗಡಿ
ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ನಿಯಮಾನುಸಾರ ಮಾಡಿ ಬೆಳ್ತಂಗಡಿ ಕೊರೊನಾ ವಾರಿಯರ್ಸ್ ತಂಡ ಮಾನವೀಯತೆ ಮೆರೆದಿದೆ.
Corona death
ಆರೋಗ್ಯ ಮತ್ತು ಕಂದಾಯ ಇಲಾಖೆಯ ನಿರ್ದೇಶನದಂತೆ ಮೃತರ ಮನೆಯವರ ಒಪ್ಪಿಗೆ ಪಡೆದು ಮಾನವ ಸ್ಪಂದನ ಕೊರೊನಾ ವಾರಿಯರ್ಸ್ ತಂಡ ಕೋವಿಡ್ ನಿಯಮಾನುಸಾರ ಪಿಪಿಇ ಕಿಟ್ ಮತ್ತು ಇನ್ನಿತರೆ ರಕ್ಷಣಾತ್ಮಕ ಕ್ರಮದೊಂದಿಗೆ ಅಂತ್ಯಕ್ರಿಯೆ ನಡೆಯಿತು. ಗುರುವಾಯನಕೆರೆ ಸಾಯಿರಾಂ ಗ್ರೂಪ್ನ ಶಶಿರಾಜ್ ಶೆಟ್ಟಿ, ರಂಜಿತ್ ಗುರುವಾಯನಕೆರೆ, ಮೃತರ ಇಬ್ಬರು ಮಕ್ಕಳ ಸಹಕಾರದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾನವ ಸ್ಪಂದನ ತಂಡದ ಪಿ.ಸಿ.ಸೆಬಾಸ್ಟಿಯನ್ ಹಾಗೂ ಅಶ್ರಫ್ ಆಲಿಕುಂಞಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
Last Updated : Sep 17, 2020, 10:51 AM IST