ಮಂಗಳೂರು (ದ.ಕ): ನಗರದ ಬಜ್ಪೆ ಪ್ರದೇಶಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆ ಎಂದು ಮುಂಬೈಯಿಂದ ಬಂದಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಅಂತ್ಯ ಸಂಸ್ಕಾರ ನಡೆದಿರುವ ಕುಟುಂಬದ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮುಂಬೈಯಿಂದ ಮಂಗಳೂರಿಗೆ ಅಂತ್ಯಕ್ರಿಯೆಗೆಂದು ಬಂದವರಲ್ಲಿ ಸೋಂಕು ಪತ್ತೆ - Corona Positive
ಕರಾವಳಿ ಭಾಗದಲ್ಲಿ ಕೊರೊನಾ ಭೀತಿ ಮುಂದುವರಿದಿದೆ. ಸಂಬಂಧಿಕರ ಅಂತ್ಯ ಸಂಸ್ಕಾರಕ್ಕೆಂದು ಮುಂಬೈಯಿಂದ ಆಗಮಿಸಿದ್ದ ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪ್ರಕರಣದಿಂದಾಗಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದವರ ಹುಡುಕಾಟದಲ್ಲಿ ಜಿಲ್ಲಾಡಳಿತ ತೊಡಗಿದೆ.
ಮುಂಬೈಯಿಂದ ಮಂಗಳೂರಿಗೆ ಅಂತ್ಯ ಸಂಸ್ಕಾರಕ್ಕೆಂದು ಬಂದವರಿಗೆ ಕೊರೊನಾ ಪಾಸಿಟಿವ್
ಮಂಗಳೂರಿನ ಬಜ್ಪೆಯಲ್ಲಿರುವ ಮನೆಗೆ ಮುಂಬೈಯಿಂದ ಅಜ್ಜಿ, ತಂದೆ ಹಾಗೂ ಇಬ್ಬರು ಮಕ್ಕಳು ಆಗಮಿಸಿದ್ದರು. ಆ ಇಬ್ಬರು ಮಕ್ಕಳ ತಾಯಿ ಮುಂಬೈಯಲ್ಲಿ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆಂದು ಮಂಗಳೂರಿನ ಬಜ್ಪೆ ಪ್ರದೇಶಕ್ಕೆ ಬಂದಿದ್ದರು.
ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಬಳಿಕ ಅವರು ಕ್ವಾರಂಟೈನ್ಗೆ ಒಳಗಾಗಿದ್ದರು. ಇದೀಗ ಅವರ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಎಲ್ಲರಲ್ಲೂ ಸೋಂಕು ದೃಢಗೊಂಡಿದೆ. ಇದೀಗ ಜಿಲ್ಲಾಡಳಿತ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದವರ ಮಾಹಿತಿ ಕಲೆ ಹಾಕುತ್ತಿದೆ.