ಮಂಗಳೂರು (ದಕ್ಷಿಣಕನ್ನಡ):ಜಿಲ್ಲೆಯಲ್ಲಿಂದು ಒಂದೇ ದಿನ 97 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,020 ಏರಿಕೆಯಾಗಿದೆ.
ದ.ಕ. ಜಿಲ್ಲೆ; 97 ಜನರಿಗೆ ಕೊರೊನಾ ಪಾಸಿಟಿವ್ - Dakshina Kannada corona update
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಒಂದೇ ದಿನ 97 ಮಂದಿಗೆ ಕೊರೊನಾ ದೃಢಪಟ್ಟಿದ್ದು, 26 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
97 ಮಂದಿಯಲ್ಲಿ 3 ಮಂದಿ ಸೌದಿಯಿಂದ ಬಂದವರಾಗಿದ್ದಾದ್ದು, ಐಎಲ್ಐ ಪ್ರಕರಣದಿಂದ 28 ಹಾಗೂ 25 ಮಂದಿಗೆ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 13 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದ್ದು, ಇನ್ನುಳಿದ 28 ಪ್ರಕರಣ ರಾಂಡಮ್ ಟೆಸ್ಟ್ನಿಂದ ಪತ್ತೆಯಾಗಿದೆ. ಜಿಲ್ಲೆಯಲ್ಲಿಂದು 11 ವರ್ಷದ ಬಾಲಕಿ ಸೇರಿ 12 ಮಹಿಳೆಯರು,14 ಮಂದಿ ಪುರುಷರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮಂಗಳೂರಿನಲ್ಲಿ 5 ಮಂದಿ ಕೊರೊನಾ ರೋಗಿಗಳು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟಾರೆ 1,020 ಸೋಂಕಿತರ ಪೈಕಿ 503 ಮಂದಿ ಗುಣಮುಖರಾಗಿದ್ದಾರೆ. 19 ಮಂದಿ ಸಾವನ್ನಪ್ಪಿದ್ದು, 498 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 280 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.