ಮಂಗಳೂರು (ದಕ್ಷಿಣಕನ್ನಡ):ಜಿಲ್ಲೆಯಲ್ಲಿಂದು ಬರೋಬ್ಬರಿ 238 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾಗೆ 6 ಜನರು ಬಲಿಯಾಗಿದ್ದಾರೆ.
ಈ 6 ಮಂದಿಯಲ್ಲಿ ಒಬ್ಬರು ಬೆಳಗಾವಿ ಮತ್ತು ಐವರು ದ.ಕ. ಜಿಲ್ಲೆಯವರಾಗಿದ್ದಾರೆ. ಡಯಾಬಿಟಿಸ್ ಮೆಲಿಟಸ್ ಮತ್ತು ಹೈಪರ್ ಕಾಲ್ಮೀಯ ಸಮಸ್ಯೆಯಿಂದ ಬಳಲುತ್ತಿದ್ದ ಬೆಳಗಾವಿಯ ರಾಮದುರ್ಗ ತಾಲೂಕಿನ 68 ವರ್ಷದ ಪುರುಷ, ಕಿಡ್ನಿ ಸಮಸ್ಯೆಯಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದ.ಕ. ಜಿಲ್ಲೆಯ ಮೂಲ್ಕಿಯ 44 ವರ್ಷದ ಪುರುಷ, ಕ್ರೋನಿಕ್ ಲಿವರ್ ಸಮಸ್ಯೆಗೊಳಗಾಗಿದ್ದ ಮಂಗಳೂರಿನ 62 ವರ್ಷದ ಪುರುಷ ಮೃತಪಟ್ಟಿದ್ದಾರೆ.
66 ವರ್ಷದ ಪುರುಷ ಕಿಡ್ನಿ ಸಮಸ್ಯೆ ಮತ್ತು ಮಧುಮೇಹ ಸಮಸ್ಯೆಗೊಳಗಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರಿನ 66 ವರ್ಷದ ಪುರುಷ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಬಂಟ್ವಾಳದ 47 ವರ್ಷದ ಮಹಿಳೆ, ಎಸ್ಎಆರ್ಐ ಪ್ರಕರಣದಲ್ಲಿ ಮಂಗಳೂರಿನ 76 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇವರೆಲ್ಲರಿಗೂ ಕೊರೊನಾ ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿಂದು ಬರೋಬ್ಬರಿ 238 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 23 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, 106 ಐಎಲ್ಐ ಪ್ರಕರಣದಲ್ಲಿ, 17 ಎಸ್ಎಆರ್ಐ ಪ್ರಕರಣದಲ್ಲಿ, 19 ಮಂದಿಗೆ ವಿದೇಶ ಪ್ರಯಾಣದಿಂದ ಸೋಂಕು ದೃಢಪಟ್ಟಿದೆ. ಇನ್ನೂ 73 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 2,763 ಪ್ರಕರಣಗಳು ದೃಢಪಟ್ಟಿವೆ. ಇಂದು 74 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 1163 ಮಂದಿ ಗುಣಮುಖರಾಗಿದ್ದಾರೆ. 1,537 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.