ಚಿಕ್ಕಮಗಳೂರು/ದಕ್ಷಿಣಕನ್ನಡ: ಕಾಫಿನಾಡಿನ 85 ಹಾಗೂ ದಕ್ಷಿಣಕನ್ನಡ ಜಿಲ್ಲೆಯ 136 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ದಕ್ಷಿಣಕನ್ನಡ ಜಿಲ್ಲೆಯ 136, ಚಿಕ್ಕಮಗಳೂರಿನ 85 ಜನರಿಗೆ ಕೊರೊನಾ ಪಾಸಿಟಿವ್ - ದಕ್ಷಿಣಕನ್ನಡ ಕೊರೊನಾ ಸಾವು
ಇಂದು ಚಿಕ್ಕಮಗಳೂರಿನ 85 ಹಾಗೂ ದಕ್ಷಿಣಕನ್ನಡ ಜಿಲ್ಲೆಯ 136 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಚಿಕ್ಕಮಗಳೂರಿನಲ್ಲಿಂದು 98 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 11,029 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಚಿಕ್ಕಮಗಳೂರು ತಾಲೂಕಿನಲ್ಲಿ 37, ಕಡೂರು 26, ಮೂಡಿಗೆರೆ 06, ತರೀಕೆರೆ 07, ಶೃಂಗೇರಿ 02, ಕೊಪ್ಪ 06 ಹಾಗೂ ಎನ್.ಆರ್.ಪುರ ಒಬ್ಬರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 12,026ಕ್ಕೆ ಏರಿಕೆಯಾಗಿದೆ. 136 ಜನರು ಕೊರೊನಾಗೆ ಬಲಿಯಾಗಿದ್ದು, ಸದ್ಯ 763 ಸಕ್ರಿಯ ಪ್ರಕರಣಗಳಿವೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಇಂದು ಮೂವರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 660ಕ್ಕೆ ಏರಿಕೆಯಾಗಿದೆ. 136 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 29,401 ಕ್ಕೆ ಏರಿಕೆಯಾಗಿದೆ. 300 ಮಂದಿ ಡಿಶ್ಚಾರ್ಜ್ ಆಗಿದ್ದು, ಈವರೆಗೆ 26,125 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,616 ಸಕ್ರಿಯ ಪ್ರಕರಣಗಳಿವೆ.