ಮಂಗಳೂರು: ಕೊರೊನಾ ಮಹಾಮಾರಿಗೆ ಇಂದು ಮಂಗಳೂರಿನಲ್ಲಿ ಸಿಐಎಸ್ಎಫ್ ಎಎಸ್ಐಯೊಬ್ಬರು ಬಲಿಯಾಗಿದ್ದಾರೆ.
ಮಂಗಳೂರು: ಕೊರೊನಾ ವಾರಿಯರ್ ಸಿಐಎಸ್ಎಫ್ ಎಎಸ್ಐ ಕೋವಿಡ್ಗೆ ಬಲಿ - ಸಿಐಎಸ್ಎಫ್ ಎಎಸ್ಐ ಸಾವು
ಕೊರೊನಾ ವಿರುದ್ಧ ಹೋರಾಟದಲ್ಲಿ ಕೋವಿಡ್ ಮಹಾಮಾರಿಗೆ ಸಿಐಎಸ್ಎಫ್ ಎಎಸ್ಐ ಬಲಿಯಾಗಿದ್ದು, ಸಿಐಎಸ್ಎಫ್ ಕೇಂದ್ರ ಕಚೇರಿ ತನ್ನ ಟ್ವಿಟರ್ ಖಾತೆಯಲ್ಲಿ ಸಂತಾಪ ಸೂಚಿಸಿದೆ.
ಸಿಐಎಸ್ಎಫ್ ಎಎಸ್ಐ ಕೋವಿಡ್ಗೆ ಬಲಿ
ಮಂಗಳೂರಿನ ಎಂಆರ್ಪಿಎಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಐಎಸ್ಎಫ್ ಎಎಸ್ಐಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕೊರೊನಾ ವಾರಿಯರ್ ಅಧಿಕಾರಿ ಸಾವಿಗೆ ಸಿಐಎಸ್ಎಫ್ ಕೇಂದ್ರ ಕಚೇರಿ ತನ್ನ ಟ್ವಿಟರ್ ಖಾತೆಯಲ್ಲಿ ಸಂತಾಪ ಸೂಚಿಸಿದೆ.