ಮಂಗಳೂರು :ಕೊರೊನಾ ಸೋಂಕು ತಗಲದಂತೆ ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುವ ಅಗತ್ಯವಿದೆ. ಸರಿಯಾಗಿ ನಿದ್ರೆ, ವ್ಯಾಯಾಮ, ಕೆಲಸ ಮಾಡಬೇಕು. ಅಲ್ಲದೇ ಸುತ್ತಮುತ್ತಲಿನವರನ್ನು ಪ್ರೀತಿಸಿ ಸಕಾರಾತ್ಮಕ ಅಂಶಗಳನ್ನು ಬೆಳೆಸಿಕೊಂಡಲ್ಲಿ ತನ್ನಷ್ಟಕ್ಕೆ ಜೀವನದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗಲಿದೆ ಎಂದು ಡಾ. ಬಿ ಎಂ ಹೆಗ್ಡೆಯವರು ಹೇಳಿದ್ದಾರೆ.
ನಿದ್ರೆ, ವ್ಯಾಯಾಮ, ನಿಯಮಿತ ಕೆಲಸ ಮಾಡಿ.. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.. ಡಾ. ಬಿ ಎಂ ಹೆಗ್ಡೆ ಸಲಹೆ - ಡಾ.ಬಿ.ಎಂ.ಹೆಗ್ಡೆ
ಸಸ್ಯಾಹಾರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಅಲ್ಲದೇ ಮಿತವಾದ ಹಣ್ಣು, ಸೊಪ್ಪುಗಳ ಸೇವನೆಯಿಂದಲೂ ದೇಹದಲ್ಲಿ ವೈರಾಣುವಿನೊಡನೆ ಹೋರಾಡುವ ಜೀವಕಣಗಳು ಅಧಿಕವಾಗಿ ನಾವು ಸೋಂಕಿನಿಂದ ಪಾರಾಗಲು ಸಾಧ್ಯ..
ಡಾ.ಬಿ.ಎಂ.ಹೆಗ್ಡೆ
ರೂಪಾಂತರಿತ ವೈರಸ್ನಿಂದಾಗಿ ಎರಡನೇ ಅಲೆ ಬಂದಿದೆ. ಮೂರನೇ ಅಲೆಯೂ ಬರಬಹುದು. ಆದ್ದರಿಂದ ಮುನ್ನೆಚ್ಚರಿಕೆ ಅಗತ್ಯ. ಸರ್ಕಾರ ಸೋಂಕು ತಡೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ, ಕೊರೊನಾ ಸಾಂಕ್ರಾಮಿಕ ಸೋಂಕು ಆಗಿರುವುದರಿಂದ ತಡೆಗಟ್ಟುವುದು ಸ್ವಲ್ಪ ಕಷ್ಟ. ಆದರೆ, ಸರಿಯಾದ ಮುನ್ನೆಚ್ಚರಿಕೆಯಿಂದ ರೋಗ ಶಮನ ಮಾಡಲು ಸಾಧ್ಯ ಎಂದರು.
ಸಸ್ಯಾಹಾರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಅಲ್ಲದೇ ಮಿತವಾದ ಹಣ್ಣು, ಸೊಪ್ಪುಗಳ ಸೇವನೆಯಿಂದಲೂ ದೇಹದಲ್ಲಿ ವೈರಾಣುವಿನೊಡನೆ ಹೋರಾಡುವ ಜೀವಕಣಗಳು ಅಧಿಕವಾಗಿ ನಾವು ಸೋಂಕಿನಿಂದ ಪಾರಾಗಲು ಸಾಧ್ಯ ಎಂದು ಬಿ ಎಂ ಹೆಗ್ಡೆಯವರು ಸಲಹೆ ನೀಡಿದರು.