ಮಂಗಳೂರು (ದಕ್ಷಿಣಕನ್ನಡ):ಮಂಗಳೂರು ಹಾಗೂ ಉಡುಪಿಯ ಡಿಸಿಸಿ ಬ್ಯಾಂಕ್ಗಳು ಸುಮಾರು 26 ಸಾವಿರ ರೈತರಿಗೆ ಸಾಲ ಕೊಡಲು ನಿರ್ಧರಿಸಿವೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
'ಡಿಸಿಸಿ ಬ್ಯಾಂಕ್ಗಳು ಶೀಘ್ರ ಎಲ್ಲಾ ರೈತರಿಗೆ ಸಾಲ ಕೊಡುವ ಗುರಿ ಮುಟ್ಟಲಿವೆ' - dakshinakannada news
ಮಂಗಳೂರು ಹಾಗೂ ಉಡುಪಿಯ ಡಿಸಿಸಿ ಬ್ಯಾಂಕ್ಗಳು ಸುಮಾರು 26 ಸಾವಿರ ರೈತರಿಗೆ ಸಾಲ ಕೊಡಲು ನಿರ್ಧರಿಸಿವೆ. ಇದರಲ್ಲಿ 19,617 ರೈತರಿಗೆ ಈಗಾಗಲೇ 396 ಕೋಟಿ ರೂ. ಸಾಲ ಕೊಡಲಾಗಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ಗಳು ಶೀಘ್ರದಲ್ಲೇ ಎಲ್ಲಾ ರೈತರಿಗೆ ಸಾಲ ಕೊಡುವ ಗುರಿ ಮುಟ್ಟಲಿವೆ: ಸಚಿವ ಎಸ್.ಟಿ.ಸೋಮಶೇಖರ್
ಇದರಲ್ಲಿ 19,617 ರೈತರಿಗೆ ಈಗಾಗಲೇ 396 ಕೋಟಿ ರೂ. ಸಾಲ ಕೊಡಲಾಗಿದೆ. ಕೆಲವೇ ಸಮಯದಲ್ಲಿ ಇನ್ನುಳಿದ ರೈತರಿಗೂ ಸಾಲ ನೀಡುವ ಮೂಲಕ ಗುರಿ ಮುಟ್ಟುವ ಯೋಜನೆ ಕೈಗೊಂಡಿದ್ದಾರೆ. ಅದೇ ರೀತಿ ಜಿಲ್ಲೆಯ 21 ಡಿಸಿಸಿ ಬ್ಯಾಂಕ್ಗಳಿಗೂ ಆದಷ್ಟು ಬೇಗ ರೈತರಿಗೆ ಸಾಲ ಕೊಡುವ ಗುರಿಯನ್ನ ಹೊಂದುವ ಬಗ್ಗೆ ಮನವಿ ಮಾಡಲಾಗಿದೆ ಎಂದರು.
ಜುಲೈ 10ರ ಬಳಿಕ ಎಲ್ಲಾ ಡಿಸಿಸಿ ಬ್ಯಾಂಕ್ಗಳ ಎಂಡಿ ಹಾಗೂ ಅಧ್ಯಕ್ಷರ ಸಭೆ ನಡೆಸಿ, ಯಾರಿಗೆ ಎಷ್ಟು ಸಾಲ ನೀಡಲಾಗಿದೆ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.