ಕರ್ನಾಟಕ

karnataka

ETV Bharat / city

40% ಕಮಿಷನ್ ಪಡೆದಿಲ್ಲವೆಂದು ಈಶ್ವರಪ್ಪನವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ : ಹಿಂದೂ ಮಹಾಸಭಾ

ಸಂತೋಷ್​ ಪಾಟಿಲ್​ ಆತ್ಮಹತ್ಯೆ ಪ್ರಕರಣ ತನಿಖೆ ನಿವೃತ್ತ ನ್ಯಾಯಾಧೀಶರ‌ ಮುಖೇನ ಮಾಡಬೇಕು. ತನಿಖೆ ನಡೆಸುವಾಗ ಸರ್ಕರ ವಜಾಮಾಡಬೇಕು ಇಲ್ಲವಾದರೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಆಗ್ರಹಿಸಿದ್ದಾರೆ..

contractor Santosh Patil suicide case investigation handled to retired judge
ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ

By

Published : Apr 16, 2022, 5:17 PM IST

ಮಂಗಳೂರು :ಈಶ್ವರಪ್ಪನವರು ಕಮೀಷನ್ ಪಡೆದಿಲ್ಲ. ನಾನು ಪ್ರಾಮಾಣಿಕನಿದ್ದೇನೆ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ನಮ್ಮ ಮಂತ್ರಿಮಂಡಲದಲ್ಲಿ ಯಾರೊಬ್ಬರೂ ಲಂಚ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಹಿಂದೂ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಆಗ್ರಹಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ತನಿಖೆ ನಿವೃತ್ತ ನ್ಯಾಯಾಧೀಶರ‌ ಮುಖೇನ ನಡೆಸಲಿ. ಈಶ್ವರಪ್ಪನವರ ಬಂಧನವಾಗಲಿ. ಈ ಪಕರಣಕ್ಕೆ ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಾರಣ ಎನ್ನಲಾಗುತ್ತಿದೆ. ಬಿಜೆಪಿಗೆ ತಮ್ಮದೇ ಸರಕಾರ ಇರುವಾಗ ಅದನ್ನು ತನಿಖೆ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಈಶ್ವರಪ್ಪನವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ..

ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಮಾತನಾಡಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವಪ್ಪನವರು ನೇರವಾಗಿ ರಾಜೀನಾಮೆ ನೀಡಲಿಲ್ಲ. ಬದಲಾಗಿ ಸಾಕಷ್ಟು ಒತ್ತಡ ಬಂದ ಬಳಿಕ ರಾಜೀನಾಮೆ ನೀಡಿದ್ದಾರೆ‌. ಆದರೆ, ಈಶ್ವರಪ್ಪನವರು ರಾಜೀನಾಮೆ ನೀಡೋದು ಮಾತ್ರವಲ್ಲ, ಅವರನ್ನು ಸಂಪುಟದಿಂದ ವಜಾಗೊಳಿಸಿ, ಬಂಧನ ಮಾಡಬೇಕು. ಪೊಲೀಸರು ಅವರ ಮೇಲೆ ಸುಮೋಟೊ ಕೇಸ್ ದಾಖಲಿಸಲಿ ಎಂದರು.

ಇದನ್ನೂ ಓದಿ:ಸಂತೋಷ್ ಪಾಟೀಲ್​ನದ್ದು ಆತ್ಮಹತ್ಯೆಯೋ, ಕೊಲೆಯೋ ಅನುಮಾನ ಶುರುವಾಗಿದೆ : ಈಶ್ವರಪ್ಪ

ABOUT THE AUTHOR

...view details