ಮಂಗಳೂರು:ನಾವು ಹಿಂದಿನ ಪ್ರಾಸ್ಪೆಕ್ಟಸ್ನಲ್ಲಿನ ನಿಯಮಗಳನ್ನು ಒಪ್ಪಿ ಕಾಲೇಜಿಗೆ ಬಂದಿದ್ದೇವೆ. ಹಿಂದಿನಿಂದಲೂ ಸಮವಸ್ತ್ರದ ಶಾಲನ್ನು ಹಿಜಾಬ್ ಆಗಿ ಧರಿಸಿ ಕಾಲೇಜಿಗೆ ಬರುತ್ತೀದ್ದೇವೆ. ಇದೀಗ ಹಿಜಾಬ್ ಧರಿಸದಂತೆ ಕಾಲೇಜಿನ ಈ ಆದೇಶದ ಹಿಂದೆ ಹೈ ಕೋರ್ಟ್ ಆದೇಶ ಇಲ್ಲ. ಹೀಗಾಗಿ ಇದು ಎಬಿವಿಪಿ ಒತ್ತಡ. ಈ ವರ್ಷ ಹಳೆಯ ವಸ್ತ್ರ ಸಂಹಿತೆಯನ್ನು ಮುಂದುವರಿಸಿ ನಮಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿ ಎಂದು ಹಿಜಾಬ್ ಪರ ವಿದ್ಯಾರ್ಥಿನಿಯರು ಬೇಡಿಕೆ ಮುಂದುವರಿಸಿದ್ದಾರೆ.
ಇದರ ಬಗ್ಗೆ ಕಾನೂನು ಹೋರಾಟ ಮಾಡಿದರೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಪ್ರಾಂಶುಪಾಲರು ಶಿರವಸ್ತ್ರ ತೆಗೆಯುವ ಯಾವುದೇ ಉದ್ದೇಶ ಇಲ್ಲ ಅಂದಿದ್ದಾರೆ. ಎಬಿವಿಪಿ ಒತ್ತಡದಿಂದಲೇ ಪ್ರಾಂಶುಪಾಲರು ಈ ಆದೇಶ ಮಾಡಿದ್ದಾರೆ. ತಮ್ಮ ಬೆಂಬಲಕ್ಕೆ ಧಾರ್ಮಿಕ ಮುಖಂಡರು ಬರುವಂತೆ ಮನವಿ ಮಾಡುತ್ತೇವೆ ಎಂದರು.