ಕರ್ನಾಟಕ

karnataka

ETV Bharat / city

ಎಸ್​​​​ಡಿಪಿಐ ಬೆಂಬಲದೊಂದಿಗೆ ಬಂಟ್ವಾಳ ಪುರಸಭೆ ’ಕೈ’ವಶ:  ನಿಜಬಣ್ಣ ಬಯಲು ಎಂದ ಬಿಜೆಪಿ - ಬಂಟ್ವಾಳ ಪುರಸಭೆ ಚುನವಾಣೆ ಕಾಂಗ್ರೆಸ್​​ ಪಕ್ಷ ಅಧಿಕಾರಕ್ಕೆ

ಎಸ್​​ಡಿಪಿಐ ಜೊತೆ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್​ ಬಂಟ್ವಾಳ ಪುರಸಭೆ ಚುನವಾಣೆಯಲ್ಲಿ ಗೆದ್ದಿದೆ. ಇದರಿಂದ ಕಾಂಗ್ರೆಸ್​ ನಿಜ ಬಣ್ಣ ಬಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೂರಿದ್ದಾರೆ.

congress-won-in-bantwal-municipality-election
ಬಂಟ್ವಾಳ ಪುರಸಭೆ ನಳಿನ್​ ಕುಮಾರ್​ ಕಟೀಲ್

By

Published : Nov 7, 2020, 5:35 PM IST

ಬಂಟ್ವಾಳ: ಕಾಂಗ್ರೆಸ್​ ದ್ವೇಷಿಸುವ ನೆಪದಲ್ಲಿ ಅಧಿಕಾರಕ್ಕಾಗಿ ಎಸ್​​ಡಿಪಿಐ ಜೊತೆ ಒಪ್ಪಂದ ಮಾಡಿಕೊಂಡು ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಎಸ್​​ಡಿಪಿಐ ಒಪ್ಪಂದ ಮಾಡಿಕೊಂಡಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಎಸ್​​ಡಿಪಿಐ ವಿರೋಧ ಎನ್ನುತ್ತಿತ್ತು. ಬಂಟ್ವಾಳದಲ್ಲೂ ಚುನಾವಣೆ ಪೂರ್ವದಲ್ಲಿ ಹೊಂದಾಣಿಕೆ ಮಾಡುವುದಿಲ್ಲ ಎಂದಿತ್ತು. ರಾಜಕೀಯ ನಿಜ ಬಣ್ಣವನ್ನು ಎರಡೂ ಪಕ್ಷಗಳು ತೋರಿಸಿದ್ದು, ಇಲ್ಲಿ ಕಂಡು ಬಂದಿದೆ ಎಂದು ನಳಿನ್ ಹೇಳಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅವರು ಅಭಿನಂದನೆ ಸಲ್ಲಿಸಿದರು.

ಬಂಟ್ವಾಳ ಪುರಸಭೆ ಚುನಾವಣೆ ಕುರಿತು ನಳಿನ್​ ಕುಮಾರ್​ ಕಟೀಲ್​ ಹೇಳಿಕೆ

ಶನಿವಾರ ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಮ್ಮದ್ ಶರೀಫ್ ಅಧ್ಯಕ್ಷರಾಗಿ ಮತ್ತು ಅದೇ ಪಕ್ಷದ ಜೆಸಿಂತಾ ಡಿಸೋಜಾ ಉಪಾಧ್ಯಕ್ಷೆಯಾಗಿ ಚುನಾಯಿತರಾಗಿದ್ದಾರೆ.

ರಣಕಣವಾಗಿದ್ದ ಬಂಟ್ವಾಳ ಪುರಸಭೆ ಚುನಾವಣೆ

2018, ಆಗಸ್ಟ್ 31ರಂದು ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ದೊರಕಿತ್ತು. 27 ಸ್ಥಾನಗಳ ಪೈಕಿ, ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4 ಸ್ಥಾನಗಳನ್ನು ಗೆದ್ದಿದ್ದವು. ಈ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎಸ್.ಡಿ.ಪಿ.ಐ. ನಿರ್ಣಾಯಕ ಪಾತ್ರ ವಹಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದನ್ನು ಹಿಂಪಡೆದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಅಧಿಕಾರವನ್ನು ಕಾಂಗ್ರೆಸ್ ಪಡೆಯುವಲ್ಲಿ ಸಹಕಾರಿಯಾಯಿತು.

ಬಿಜೆಪಿ ಪರವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮತ ಚಲಾಯಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಕಾಂಗ್ರೆಸ್​ನಿಂದ ಮಹಮ್ಮದ್ ಶರೀಫ್, ಎಸ್​​ಡಿಪಿಐನಿಂದ ಮೊನೀಶ್ ಅಲಿ ನಾಮಪತ್ರ ಸಲ್ಲಿಸಿದ್ದರು.

ಎಸ್​​.ಡಿ.ಪಿ.ಐ. ಬೆಂಬಲದೊಂದಿಗೆ ಬಂಟ್ವಾಳ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮೀನಾಕ್ಷಿ ಗೌಡ ಮತ್ತು ಕಾಂಗ್ರೆಸ್​ನ ಜೆಸಿಂತಾ ಡಿಸೋಜಾ ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಬೆಳವಣಿಯಲ್ಲಿ ಎಸ್​ಡಿಪಿಐನ ಮುನೀಶ್ ಅಲಿ ನಾಮಪತ್ರ ಹಿಂಪಡೆದುಕೊಂಡರು. ಕಾಂಗ್ರೆಸ್ ಪರವಾಗಿ 16, ಬಿಜೆಪಿ ಪರವಾಗಿ 13 ಮತಗಳು ಚಲಾವಣೆಯಾದವು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮುನೀಶ್ ಆಲಿ, ಜಾತ್ಯತೀತ ಸಿದ್ಧಾಂತ ಹಿನ್ನೆಲೆಯಲ್ಲಿ ಕಾಂಗ್ರೆಸ್​ಗೆ ಬೆಂಬಲ ನೀಡಿದ್ದಾಗಿ ಹೇಳಿದರು. ಮಹಮ್ಮದ್ ಶರೀಫ್ ಮಾತನಾಡಿ, ತೆರಿಗೆ ಸಂಬಂಧಿಸಿದಂತೆ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಎಸ್​​​​ಡಿಪಿಐ ಪಕ್ಷದ ಸದಸ್ಯರು ಅವರಾಗಿಯೇ ಕಾಂಗ್ರೆಸ್​ನ ನಿಲುವನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ, ಪಕ್ಷ ತನ್ನ ನಿಲುವಿನೊಂದಿಗೆ ಜನಪರ ಕಾರ್ಯಗಳನ್ನು ಬಂಟ್ವಾಳ ಪುರಸಭೆಯ ಹಿತದೃಷ್ಟಿಯಿಂದ ನಡೆಸಲಿದೆ ಎಂದು ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ತಿಳಿಸಿದ್ದಾರೆ.

ABOUT THE AUTHOR

...view details