ಮಂಗಳೂರು: ಗಾಂಧಿ ಹತ್ಯೆಯನ್ನು ಸಮರ್ಥಿಸುವ ಮತೀಯವಾದಿಗಳನ್ನು ಮೂಲೋತ್ಪಾಟನೆ ಮಾಡುವ ಮೂಲಕ ಅವರಿಗೆ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಗಾಂಧಿ ಹತ್ಯೆಯನ್ನು ಸಮರ್ಥಿಸುವ ಮತೀಯವಾದಿಗಳನ್ನು ಮೂಲೋತ್ಪಾಟನೆ ಮಾಡಬೇಕು: ರಮಾನಾಥ ರೈ - ಮೂಲೋತ್ಪಾಟನೆ
ಗಾಂಧೀಜಿಯವರ ಪುಣ್ಯತಿಥಿ ದಿನ ಗಾಂಧಿ ಪ್ರತಿಕೃತಿ ದಹಿಸಿದ್ದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಗಾಂಧಿ ಹತ್ಯೆಯನ್ನು ಸಮರ್ಥಿಸುವ ಮತೀಯವಾದಿಗಳನ್ನು ಮೂಲೋತ್ಪಾಟನೆ ಮಾಡುವ ಮೂಲಕ ದೇಶದ್ರೋಹಿಗಳಿಗೆ ಪಾಠ ಕಲಿಸಬೇಕಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು
ರಮಾನಾಥ ರೈ
ಗಾಂಧಿ ಹತ್ಯೆ ಪ್ರಾತ್ಯಕ್ಷಿಕೆ ನಮಗೆ ದೊಡ್ಡ ಅಘಾತ ತಂದಿದೆ. ಇಡೀ ಜಗತ್ತಿನಲ್ಲಿ ಗಾಂಧೀಜಿಯವರ ಪುಣ್ಯತಿಥಿ ದಿನವನ್ನು ಅಹಿಂಸಾ ದಿನವಾಗಿ ಘೋಷಣೆ ಮಾಡಲಾಗಿದೆ. ಮತೀಯವಾದಿ ಶಕ್ತಿಗಳನ್ನು ಮೂಲೋತ್ಪಾಟನೆ ಮಾಡುವ ಮೂಲಕ ದೇಶದ್ರೋಹಿಗಳಿಗೆ ಪಾಠ ಕಲಿಸಬೇಕಾಗಿದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪಾಲ್ಗೊಂಡಿದ್ದರು.