ಕರ್ನಾಟಕ

karnataka

ETV Bharat / city

ಟೆಂಪೋ-ಸ್ಕೂಟರ್ ನಡುವೆ ಡಿಕ್ಕಿ.. ಸ್ಕೂಟರ್ ಸವಾರ ದುರ್ಮರಣ.. - ಟೆಂಪೋ-ಸ್ಕೂಟರ್ ನಡುವೆ ಡಿಕ್ಕಿಯಾಗಿ ಸ್ಕೂಟರ್ ಸಾವು

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಟೆಂಪೋ-ಸ್ಕೂಟರ್ ನಡುವೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿದ್ದಾರೆ.

ಟೆಂಪೋ-ಸ್ಕೂಟರ್ ನಡುವೆ ಡಿಕ್ಕಿ

By

Published : Oct 11, 2019, 11:13 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಟೆಂಪೋ-ಸ್ಕೂಟರ್ ನಡುವೆ ಡಿಕ್ಕಿಯಾಗಿಯಾದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿದ್ದಾರೆ.

ಸೂರಿಕುಮೇರು ನಿವಾಸಿ ಇಬ್ರಾಹಿಂ (47)ಮೃತ ದುರ್ದೈವಿ. ಇಬ್ರಾಹಿಂ ತನ್ನ ಮಗಳೊಂದಿಗೆ ಕಾರ್ಕಳದ ಬೆಳುವಾಯಿ ಸಂಬಂಧಿಕರ ಮನೆಗೆ ತೆರಳಿ ವಾಪಸು ಬರುವ ವೇಳೆ ಪುಂಜಾಲಕಟ್ಟೆಯ ಮಾಡಮೆ ಎಂಬಲ್ಲಿ ಬಂಟ್ವಾಳದ ಕಡೆಯಿಂದ ಬರುತ್ತಿದ್ದ ಟೆಂಪೋಗೆ ಸ್ಕೂಟರ್ ಡಿಕ್ಕಿಯಾಗಿದೆ. ಸ್ಕೂಟರ್ ಸವಾರ ಇಬ್ರಾಹಿಂ ಹಾಗೂ ಹಿಂಬದಿಯಲ್ಲಿದ್ದ ಮಗಳು ಗಂಭೀರ ಗಾಯಗೊಂಡ ಪರಿಣಾಮ ಅವರನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಇಬ್ರಾಹಿಂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಪುಂಜಲ್ ಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details