ಕರ್ನಾಟಕ

karnataka

ETV Bharat / city

ವಿನಯ್ ಕುಲಕರ್ಣಿ ಆರೋಪಿ ಸ್ಥಾನದಲ್ಲಿರುವುದರಿಂದ ಸಿಬಿಐ ವಶಕ್ಕೆ ಪಡೆದುಕೊಂಡಿದೆ: ಸಿಎಂ

ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐಗೆ ಸಾಕ್ಷ್ಯಧಾರ ಸಿಕ್ಕಿರುವುದರಿಂದ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

cm-bs-yadiyurappa-statement-on-vinay-kulkarni-arrest
ಯಡಿಯೂರಪ್ಪ

By

Published : Nov 5, 2020, 3:55 PM IST

ಮಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಆರೋಪಿ ಸ್ಥಾನದಲ್ಲಿರುವುದರಿಂದ ಸಿಬಿಐ ಅವರನ್ನು ವಶಕ್ಕೆ ಪಡೆದುಕೊಂಡಿದೆ. ಸಿಬಿಐಗೆ ಸಾಕ್ಷ್ಯಧಾರ ಸಿಕ್ಕಿರುವುದರಿಂದ ವಶಕ್ಕೆ ಪಡೆದಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು‌.

ಹತ್ಯೆಯಾದ ಯೋಗೇಶ್ ಗೌಡ ಕುಟುಂಬಕ್ಕೆ ನ್ಯಾಯ ಲಭಿಸಬೇಕೆಂಬುದು ಎಲ್ಲರ ಅಪೇಕ್ಷೆ. ಈಗಲಾದರೂ ನ್ಯಾಯ ದೊರಕಲಿದೆ. ವಿನಯ್ ಕುಲಕರ್ಣಿ ಬಿಜೆಪಿಗೆ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು ಎಂದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಕುರಿತು ಸಿಎಂ ಬಿಎಸ್​ವೈ ಪ್ರತಿಕ್ರಿಯೆ

ಶಿರಾ ಹಾಗೂ ಆರ್.ಆರ್. ನಗರದ ಚುನಾವಣೆ ಮುಗಿದಿದ್ದು, ಎರಡೂ ಕ್ಷೇತ್ರದಲ್ಲಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲಲಿದ್ದೇವೆ‌. ಆ ಬಳಿಕ ದೆಹಲಿಗೆ ತೆರಳಲಿದ್ದೇನೆ ಅಥವಾ ದೂರವಾಣಿ ಮುಖಾಂತರ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ನಡೆಸಲಿದ್ದೇನೆ ಎಂದರು.

ನಳಿನ್ ಕುಮಾರ್ ಕಟೀಲ್​ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷದ ಸಂಘಟನೆ ಬಲವಾಗಿ ಬೆಳೆದಿದೆ. ಈಗಾಗಲೇ ಪಕ್ಷ ಸಂಘಟನೆಗಾಗಿ ಎರಡು ಮೂರು ಬಾರಿ ರಾಜ್ಯ ಸುತ್ತಿದ್ದಾರೆ‌. ಅವರದ್ದೇ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ನಡೆಯುತ್ತಿದೆ‌. ರಾಜ್ಯದ ಅಭಿವೃದ್ಧಿ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

ABOUT THE AUTHOR

...view details