ಕರ್ನಾಟಕ

karnataka

ETV Bharat / city

ಹುಡುಗಿಯ ವಿಚಾರಕ್ಕೆ ಒಂದೇ ಸಂಘಟನೆಯ ಎರಡು ಗುಂಪುಗಳ ನಡುವೆ ಗಲಾಟೆ! - ಹುಡುಗಿ ವಿಚಾರವಾಗಿ ಸುಳ್ಯದಲ್ಲಿ ಗಲಾಟೆ

ಯುವಕನೊಬ್ಬ ಅಪ್ರಾಪ್ತೆಯೋರ್ವಳನ್ನು ಆಕೆಯ ಮನೆಗೆ ಬಿಡಲೆಂದು ಪುತ್ತೂರಿನಿಂದ ಕಾರೊಂದರಲ್ಲಿ ಕರೆ ತಂದಿದ್ದಾನೆ. ಈ ವಿಚಾರವಾಗಿ ಸಂಘಟನೆಯೊಂದರ ಎರಡು ಗುಂಪುಗಳ ನಡುವೆ ಗಲಾಟೆ ಆಗಿದ್ದು, ಯುವಕನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

clash between two groups : case registered in sulya police station
ಹುಡುಗಿ ವಿಚಾರವಾಗಿ ಗಲಾಟೆ - ಸುಳ್ಯ ಠಾಣೆಯಲ್ಲಿ ದೂರು ದಾಖಲು

By

Published : Jan 25, 2022, 7:24 AM IST

ಸುಳ್ಯ(ದಕ್ಷಿಣ ಕನ್ನಡ):ಹುಡುಗಿಯೊಬ್ಬಳನ್ನು ಕಾರಿನಲ್ಲಿ ಕರೆದುಕೊಂಡು ಬಂದ ವಿಚಾರವಾಗಿ ಸುಳ್ಯ ತಾಲೂಕಿನ ಪೈಚಾರು ಎಂಬಲ್ಲಿ ಸಂಘಟನೆಯೊಂದರ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಕಾರನ್ನು ಜಖಂಗೊಳಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿರುವ ಯುವಕನೊಬ್ಬ ಅಪ್ರಾಪ್ತೆಯೋರ್ವಳನ್ನು ಆಕೆಯ ಮನೆಗೆ ಬಿಡಲೆಂದು ಪುತ್ತೂರಿನಿಂದ ಕಾರೊಂದರಲ್ಲಿ ಕರೆ ತಂದಿದ್ದಾನೆ. ಇದನ್ನು ಗಮನಿಸಿದ್ದ ಅದೇ ಸಂಘಟನೆಯ ಮತ್ತೊಂದು ಯುವಕರ ತಂಡ ಹಾಗೂ ಹುಡುಗಿಯ ಮನೆಯವರು ಕಾರನ್ನು ತಡೆದು ನಿಲ್ಲಿಸಿ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ಕಾರನ್ನು ಕೂಡಾ ಜಖಂಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಹಾಸನ: ಕುಡಿಯಲು ಹಣ ಕೊಡಲಿಲ್ಲ ಎಂದು ಅಜ್ಜಿಯನ್ನೇ ಕೊಂದ ಮೊಮ್ಮಗ

ಹೊಡೆದಾಟ ನಡೆಸಿದ ನಂತರ ಗಾಯಗೊಂಡ ಎರಡೂ ಗುಂಪುಗಳ ಕೆಲವರು ಆಸ್ಪತ್ರೆಗೆ ದಾಖಲಾಗಲು ಸುಳ್ಯಕ್ಕೆ ತೆರಳಿದ್ದು, ಈ ವೇಳೆ ಸಂಘಟನೆಯ ಪ್ರಮುಖರು ಮಧ್ಯ ಪ್ರವೇಶಿಸಿ ರಾಜಿ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಯುವಕನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details