ಕರ್ನಾಟಕ

karnataka

By

Published : Feb 4, 2022, 1:42 PM IST

ETV Bharat / city

ಕರ್ಣಾಟಕ ಬ್ಯಾಂಕ್‌ಗೆ ಪ್ರತಿಷ್ಠಿತ 'ಡಿಎಕ್ಸ್ 2021 ಅವಾರ್ಡ್​​'

ಕಾನ್ಫಿಡರೇಷನ್​​ ಆಫ್ ಇಂಡಿಯನ್ ಇಂಡಸ್ಟ್ರಿ ನೀಡುವ ಡಿಎಕ್ಸ್ 2021- ಡಿಜಿಟಲ್ ಟ್ರಾನ್ಸ್ಫರ್ಮೇಷನ್‌ ಅವಾರ್ಡ್ ಅನ್ನು ಕರ್ಣಾಟಕ ಬ್ಯಾಂಕ್​ಗೆ ಪ್ರದಾನ ಮಾಡಲಾಗಿದೆ.

Karnataka Bank conferred with CII award
ಕರ್ಣಾಟಕ ಬ್ಯಾಂಕ್‌ಗೆ ಪ್ರತಿಷ್ಠಿತ 'ಡಿಎಕ್ಸ್ 2021 ಅವಾರ್ಡ್​​'

ಮಂಗಳೂರು:ಕರ್ಣಾಟಕ ಬ್ಯಾಂಕ್​ಗೆ ಪ್ರತಿಷ್ಠಿತ ಪ್ರಶಸ್ತಿಯೊಂದು ಒಲಿದು ಬಂದಿದೆ. ‘ಕೆಬಿಎಲ್ ವಿಕಾಸ್’ ಎಂಬ ಪರಿವರ್ತನಾ ಪ್ರಕ್ರಿಯೆಯ ಫಲಶ್ರುತಿಯಾಗಿ 'ಡಿಎಕ್ಸ್ 2021- ಡಿಜಿಟಲ್ ಟ್ರಾನ್ಸ್ಫರ್ಮೇಷನ್‌ ಅವಾರ್ಡ್'​ ಅನ್ನು ಕಾನ್ಫಿಡರೇಷನ್​​ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಂಸ್ಥೆಯಿಂದ ಪ್ರದಾನ ಮಾಡಲಾಗಿದೆ.

ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ ಬ್ಯಾಂಕ್​ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ.ಎಂ.ಎಸ್ '2017ರಲ್ಲಿ ಕರ್ಣಾಟಕ ಬ್ಯಾಂಕ್ ‘ಕೆಬಿಎಲ್ ವಿಕಾಸ್’ ಎನ್ನುವ ಹೆಸರಿನಲ್ಲಿ ಪ್ರಾರಂಭಿಸಿದ ಸಮಗ್ರ ಪರಿವರ್ತನೆಯ ಪ್ರಕ್ರಿಯೆಯು, ಡಿಜಿಟಲ್ ವ್ಯವಹಾರಗಳ ಅನುಷ್ಠಾನದಲ್ಲಿ ಬ್ಯಾಂಕ್​​​​​​​​​ ಸಕ್ರಿಯಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ಣಾಟಕ ಬ್ಯಾಂಕ್​ನ ಮ್ಯಾನೇಜಿಂಗ್ ಡೈರೆಕ್ಟರ್ ಮಹಾಬಲೇಶ್ವರ.ಎಂ.ಎಸ್

ಇದರ ಜೊತೆಗೆ ನಮ್ಮ ಬ್ಯಾಂಕಿನ ಉತ್ಪನ್ನಗಳು ಹಾಗೂ ಪರ್ಯಾಯ ಸೇವಾ ವಾಹಿನಿಗಳಾದ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಇತ್ಯಾದಿಗಳು ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್​ನ ಉತ್ತಮ ಅನುಭೂತಿ ನೀಡುತ್ತಿವೆ. ‘ಕೆಬಿಎಲ್ ವಿಕಾಸ್’ನ ಮುಂದಿನ ಭಾಗವಾಗಿ ಬ್ಯಾಂಕ್ ಇತ್ತೀಚೆಗೆ ‘ಕೆಬಿಎಲ್ ನೆಕ್ಸ್ಟ್' ಎನ್ನುವ ಹೊಸ ಡಿಜಿಟಲ್ ಪರಿವರ್ತನಾ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಎಲ್ಲ ಪ್ರಯತ್ನಗಳ ಫಲವಾಗಿ ನಮ್ಮ ಬ್ಯಾಂಕ್ ಭವಿಷ್ಯದ ಡಿಜಿಟಲ್ ಬ್ಯಾಂಕ್ ಆಗಿ ಹೊರಹೊಮ್ಮುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಫೇಸ್‌ಬುಕ್‌ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ; ಶ್ರೀಮಂತಿಕೆಯಲ್ಲಿ ಅದಾನಿ, ಅಂಬಾನಿ ನಂತರದ ಸ್ಥಾನಕ್ಕೆ ಇಳಿಕೆ..

ABOUT THE AUTHOR

...view details