ಮಂಗಳೂರು : ರಾಜ್ಯಾದ್ಯಂತ ಇಂದು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಮಂಗಳೂರಿನ ವಿವಿಧ ಚರ್ಚ್ಗಳಲ್ಲಿ ವಿಶೇಷ ಪಾರ್ಥನೆ ಸಲ್ಲಿಸುವ ಮೂಲಕ ಕ್ರಿಶ್ಚಿಯನ್ನರು ಹಬ್ಬ ಆಚರಿಸಿದರು.
ಮಂಗಳೂರಿನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ.. ಪರಮ ಪ್ರಸಾದ ವಿತರಣೆ - ಮಂಗಳೂರಿನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಂಗಳೂರು ನಗರದ ವಿವಿಧ ಚರ್ಚ್ಗಳಲ್ಲಿ ಬಲಿ ಪೂಜೆ ನೆರವೇರಿಸಲಾಯಿತು. ರೊಸಾರಿಯೋ ಕೆಥಡ್ರಲ್ ಚರ್ಚ್ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ ಅವರ ನೇತೃತ್ವದಲ್ಲಿ ಬಲಿಪೂಜೆ ನಡೆಯಿತು.
ಕ್ರಿಸ್ಮಸ್ ಆಚರಣೆ
ನಗರದ ರೊಸಾರಿಯೋ ಕೆಥಡ್ರಲ್ ಚರ್ಚ್ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ ಅವರ ನೇತೃತ್ವದಲ್ಲಿ ಬಲಿಪೂಜೆ ನಡೆಯಿತು.
ಬಲಿಪೂಜೆಯಲ್ಲಿ ಆಶೀರ್ವಚನ ನೀಡಿದ ಬಿಷಪ್ ಅವರು ಕ್ರಿಸ್ಮಸ್ ಸಂದೇಶವನ್ನು ಸಾರಿದರು. ಬಳಿಕ ಪರಮ ಪ್ರಸಾದವನ್ನು ನೀಡಲಾಯಿತು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆದ ನಗರದ ಚರ್ಚ್ಗಳಲ್ಲಿ ನಡೆದ ಬಲಿಪೂಜೆಗಳಲ್ಲಿ ಕ್ರಿಶ್ಚಿಯನ್ನರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.