ಮಂಗಳೂರು (ದಕ್ಷಿಣ ಕನ್ನಡ) :ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ನಮ್ಮ ವಿರುದ್ಧವಾಗಿ ಬಂದರೆ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದರೆ ಸ್ವಾಗತಿಸುತ್ತೇವೆ. ತೀರ್ಪು ವಿರುದ್ಧವಾಗಿ ಬಂದರೆ ಕಾನೂನಾತ್ಮಕ ನೆಲೆಗಟ್ಟಿನಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದರು.
ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಂತೆ ಸಿಎಫ್ಐ ರಾಜ್ಯಾಧ್ಯಕ್ಷ ಅಥಾವುಲ್ಲಾ ಪೂಂಜಾಲಕಟ್ಟೆ ಪ್ರತಿಕ್ರಿಯೆ ನೀಡಿರುವುದು.. ವಿದ್ಯಾರ್ಥಿನಿಯರು ಕಳೆದ ನವೆಂಬರ್‌ನಿಂದಲೇ ಹಿಜಾಬ್ ವಿವಾದ ಎಬ್ಬಿಸಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ವಿದ್ಯಾರ್ಥಿನಿಯರು ಮಾಡಿದ್ದ ಸರಣಿ ಟ್ವೀಟ್‌ಗಳ ಸ್ಕ್ರೀನ್ ಶಾಟ್ ಬಿಡುಗಡೆ ಮಾಡಲಾಗಿದೆ.
ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ವಿದ್ಯಾರ್ಥಿಗಳು, ಟ್ವೀಟ್ ಮಾಡುವುದು ಅವರ ವೈಯಕ್ತಿಕ ವಿಚಾರ. ಅವರಿಗೆ ಸಂಬಂಧಿಸಿದ ವಿಚಾರಕ್ಕೆ ಅವರು ರೀ ಟ್ವಿಟ್ ಮಾಡುತ್ತಾರೆ. ಅದನ್ನು ಸಂಘಟನೆ ಜೊತೆ ಸಂಪರ್ಕ ಕಲ್ಪಿಸುವುದು ಸರಿಯಲ್ಲ. ಇದೊಂದು ನಿರಾಧಾರ ಆರೋಪ ಎಂದರು.
ಇದನ್ನೂ ಓದಿ:ನನ್ನ ದೆಹಲಿ ಪ್ರವಾಸಕ್ಕೆ ಯಾವುದೇ ರಾಜಕೀಯ ಬಣ್ಣ ಬೇಡ : ಮಾಜಿ ಸಿಎಂ ಜಗದೀಶ್ ಶೆಟ್ಟರ್
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ಹೋರಾಟ ಕೈಗೆ ತೆಗೆದುಕೊಂಡಿರುವುದು ನಿಜ. ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಅವರ ಜೊತೆ ನಿಂತಿದ್ದೇವೆ. ಟ್ವೀಟ್ನಲ್ಲಿ ಯಾವುದೇ ವಿವಾದಾತ್ಮಕ ವಿಷಯ ಇದ್ರೆ ಕ್ರಮ ಆಗಲಿ. ವಿದ್ಯಾರ್ಥಿಗಳಿಗೆ ಅವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ.
ವಿದ್ಯಾರ್ಥಿಗಳು ನಮ್ಮಲ್ಲಿ ಸಹಾಯ ಕೇಳಿದ್ದಾರೆ. ನಾವು ಸಹಾಯ ಮಾಡಿದ್ದೇವೆ. ಇದು ಹಿಂಬದಿಯ ಕುಮ್ಮಕ್ಕು ಅಲ್ಲ, ಇದು ಮುಂಬದಿಯ ಹೋರಾಟ ಎಂದರು.