ಮಂಗಳೂರು: ನಗರದ ಪುರಭವನದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ವತಿಯಿಂದ ಆಯೋಜಿಸಿದ ಗರ್ಲ್ಸ್ ಕಾನ್ಫರೆನ್ಸ್ನಲ್ಲಿ ಹೈಕೋರ್ಟ್ ಹಾಗೂ ಸರ್ಕಾರ ನೀಡಿರುವ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದ ಸಿಎಫ್ಐ ರಾಷ್ಟ್ರಾಧ್ಯಕ್ಷ ಎಂ.ಎಸ್.ಸಾಜೀದ್, "ಹಿಜಾಬ್ ಹೋರಾಟದಲ್ಲಿ ತಮ್ಮ ಹಕ್ಕುಗಳಿಗಾಗಿ ಕರ್ನಾಟಕದ ಯುವತಿಯರು ಹೋರಾಡುತ್ತಿದ್ದಾರೆ. ಆರ್ಎಸ್ಎಸ್ ಮತ್ತು ಹಿಂದುತ್ವದ ವಿರುದ್ಧ ಈ ಹೋರಾಟ ನಡೆಯುತ್ತಿದೆ. ಒಂದು ಕೈಯ್ಯಲ್ಲಿ ಓದು ಮತ್ತೊಂದು ಕೈಯ್ಯಲ್ಲಿ ಹೋರಾಟ ಮಾಡುತ್ತಿದ್ದಾರೆ" ಎಂದರು.
'ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ': ಉಡುಪಿ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ಮಾತನಾಡಿ, "ಸುಪ್ರೀಂಕೋರ್ಟ್ನಲ್ಲಿ ಮುಂದಿನ ವಾರದಿಂದ ಹಿಜಾಬ್ ಕುರಿತಾದ ವಿಚಾರಣೆ ನಡೆಯಲಿದೆ. ಹಿಜಾಬ್ ವಿವಾದ ಉಂಟಾದಾಗಿನಿಂದ ಜೀವನದಲ್ಲಿ ಬಹಳಷ್ಟು ತಾಳ್ಮೆ ಕಲಿತುಕೊಂಡಿದ್ದೇವೆ. ಕಾಲೇಜು, ಮನೆ, ಅಂಗಡಿ ಎಲ್ಲ ಕಡೆ ಹಿಜಾಬ್ ಧರಿಸಿಯೇ ಹೋಗುತ್ತೇವೆ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಹೋರಾಟದಿಂದಾಗಿ ನಮ್ಮ ಶಿಕ್ಷಣ ಸ್ಥಗಿತವಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.