ಮಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಯೋಜನೆ ಕುರಿತು ಪ್ರತಿಯೊಬ್ಬರಿಗೆ ತಿಳಿಸಿಲು ಬಿಜೆಪಿ ರೈತ ಮೋರ್ಚಾದಿಂದ ಕಾರ್ಯಾಗಾರ, ಸಮಾವೇಶಗಳನ್ನು ಹಮ್ಮಿಕೊಂಡು ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಕೇಂದ್ರ ಕೃಷಿ ಕಾಯ್ದೆ ಜಾಗೃತಿಗಾಗಿ ಬಿಜೆಪಿ ರೈತ ಮೋರ್ಚಾದಿಂದ ಕಾರ್ಯಾಗಾರ, ಸಮಾವೇಶ - ಕೇಂದ್ರ ಕೃಷಿ ಯೋಜನೆ
ದ.ಕ. ಜಿಲ್ಲೆಯಲ್ಲಿನ ರೈತ ಮುಖಂಡರಿಗೆ ಕೇಂದ್ರದ ನೂತನ ಕೃಷಿ ಯೋಜನೆಯ ಬಗ್ಗೆ ಅರಿವು ಇದೆ. ಆದರೆ ಜನಸಾಮಾನ್ಯರ ಮಟ್ಟಿಗೆ ಈ ಯೋಜನೆಯ ಅರಿವು ಮೂಡಿಸಲು ಕಾರ್ಯಾಗಾರ ಹಾಗೂ ಸಮಾವೇಶಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತದೆ. ಅಲ್ಲದೆ ಮಂಡಲ ಸಮಿತಿಯ ಕ್ಷೇತ್ರಗಳಲ್ಲಿಯೂ ಈ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ದ.ಕ.ಜಿಲ್ಲಾ ಮಟ್ಟದಲ್ಲಿ ಈ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ದ.ಕ.ಜಿಲ್ಲೆಯಲ್ಲಿನ ರೈತ ಮುಖಂಡರಿಗೆ ಕೇಂದ್ರದ ನೂತನ ಕೃಷಿ ಯೋಜನೆಯ ಬಗ್ಗೆ ಅರಿವು ಇದೆ. ಆದರೆ ಜನಸಾಮಾನ್ಯರ ಮಟ್ಟಿಗೆ ಈ ಯೋಜನೆಯ ಅರಿವು ಮೂಡಿಸಲು ಕಾರ್ಯಾಗಾರ ಹಾಗೂ ಸಮಾವೇಶಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತದೆ. ಅಲ್ಲದೆ ಮಂಡಲ ಸಮಿತಿಯ ಕ್ಷೇತ್ರಗಳಲ್ಲಿಯೂ ಈ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಮುಂದಿನ ವಾರ ಪುತ್ತೂರಿನಲ್ಲಿ ಜಿಲ್ಲಾ ಕಾರ್ಯಾಗಾರ ನಡೆಯಲಿದೆ. ಆ ಬಳಿಕ ಆಯಾ ಮಂಡಲಗಳಲ್ಲಿಯೂ ಕಾರ್ಯಾಗಾರ ಆಯೋಜನೆ ಮಾಡಲಾಗುತ್ತದೆ. ಎಲ್ಲಾ ಕಾರ್ಯಾಗಾರಗಳು ಮುಗಿದ ಬಳಿಕ ರೈತ ಸಮಾವೇಶ ನಡೆಯುತ್ತದೆ. ಅಲ್ಲಿ ಸಚಿವರಾದಿಯಾಗಿ ಎಲ್ಲಾ ಮುಖಂಡರು ಭಾಗವಹಿಸಲಿದ್ದು, ಜನಸಾಮಾನ್ಯರಿಗೆ ಕೃಷಿ ಕಾಯ್ದೆಯ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.