ಮಂಗಳೂರು:ನಗರದ ಹೊರವಲಯದ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಕಾರೊಂದು ಪತ್ತೆಯಾಗಿದ್ದು, ಕಾರಿನೊಳಗೆ ಯಾರೂ ಇಲ್ಲದಿರುವ ಕಾರಣ ವ್ಯಕ್ತಿಯು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ನೇತ್ರಾವತಿ ಸೇತುವೆಯಲ್ಲಿ ವಾರಸುದಾರರಿಲ್ಲದ ಕಾರು ಪತ್ತೆ: ವ್ಯಕ್ತಿ ಆತ್ಮಹತ್ಯೆ ಶಂಕೆ - ಮಂಗಳೂರು ನೇತ್ರಾವತಿ ಸೇತುವೆ ಕಾರು ಪತ್ತೆ
ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ವಾರಸುದಾರರಿಲ್ಲದ ಕಾರು ಪತ್ತೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ ಕಾರು ಪುಳಿಂಚ ನಿವಾಸಿ ವಿಕ್ರಮ್ ಎಂಬುವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಆತ್ಮಹತ್ಯೆ ಶಂಕೆಯಿಂದ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದು, ಅವರು ಪತ್ತೆಯಾಗದ ಕಾರಣ ಕೊಣಾಜೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ.
ಉಳ್ಳಾಲ ನೇತ್ರಾವತಿ ಸೇತುವೆ
ಮಧ್ಯರಾತ್ರಿ ಸುಮಾರು 12.30 ಸುಮಾರಿಗೆ ಕಾರು ಸೇತುವೆಯಲ್ಲಿ ಪತ್ತೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ ಕಾರಿನ ಹೆಡ್ ಲೈಟುಗಳು ಉರಿಯುತ್ತಿದ್ದು, ಬಾಗಿಲುಗಳು ತೆರೆದುಕೊಂಡಿದ್ದವು. ಈ ಬಗ್ಗೆ ತನಿಖೆ ನಡೆಸಿದಾಗ ಕಾರು ಉಳ್ಳಾಲದ ಪುಳಿಂಚ ನಿವಾಸಿ ವಿಕ್ರಮ್ ಎಂಬುವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.
ಆತ್ಮಹತ್ಯೆ ಅನುಮಾನದ ಮೇಲೆ ನೇತ್ರಾವತಿ ನದಿಯಲ್ಲಿ ವಿಕ್ರಮ್ ಅವರಿಗಾಗಿ ತೀವ್ರ ಶೋಧ ನಡೆಸಲಾಗಿತ್ತು. ಆದರೆ ಅವರು ಎಲ್ಲೂ ಪತ್ತೆಯಾಗದ ಹಿನ್ನೆಲೆ ಕೊಣಾಜೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.