ಕರ್ನಾಟಕ

karnataka

ETV Bharat / city

ದೇಶದಲ್ಲೇ ಮೊದಲ ಬಾರಿ ಹಲಸಿನ ಹಣ್ಣಿನ ಚಾಕೋಲೆಟ್ ಪರಿಚಯಿಸಿದ ಕ್ಯಾಂಪ್ಕೋ - Campco introduced in Jackfruit chocolate

ಹಲಸಿನ ಹಣ್ಣಿನ ಚಾಕೋಲೆಟ್ ಪ್ರಾಯೋಗಿಕ ತಯಾರಿಯನ್ನು ಕಳೆದ 9 ತಿಂಗಳಿನಿಂದ ಪುತ್ತೂರು ಕ್ಯಾಂಪ್ಕೋ ಚಾಕೋಲೆಟ್ ಪ್ಯಾಕ್ಟರಿಯಲ್ಲಿ ನಡೆಸಲಾಗಿದ್ದು, ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

Jackfruit chocolate
ಹಲಸಿನ ಹಣ್ಣಿನ ಚಾಕೋಲೆಟ್

By

Published : Jul 12, 2021, 10:41 PM IST

ಮಂಗಳೂರು: ದೇಶದಲ್ಲೇ ಮೊದಲ ಬಾರಿ ಹಲಸಿನ ಹಣ್ಣಿನ ಚಾಕೋಲೆಟ್ ಅನ್ನು ಕ್ಯಾಂಪ್ಕೋ ಸಂಸ್ಥೆ ಇಂದು ಮಾರುಕಟ್ಟೆಗೆ ಪರಿಚಯಿಸಿದೆ.

ಜಾಕ್ ಫ್ರೂಟ್ ಎಕ್ಲೆರ್ ಹೆಸರಿನ ಈ ಚಾಕೋಲೆಟ್ ಅನ್ನು ಇಂದು ಕ್ಯಾಂಪ್ಕೋ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಕ್ಯಾಂಪ್ಕೋ ಸಂಸ್ಥೆ ಈಗಾಗಲೇ ವಿವಿಧ ಬಗೆಯ ಚಾಕೋಲೆಟ್​ಗಳನ್ನು ಪರಿಚಯಿಸಿದ್ದು, ಹಲಸಿನ ಹಣ್ಣಿನ ಚಾಕೋಲೆಟ್ ಇಂದು ಪರಿಚಯಿಸಿದೆ.

ಹಲಸಿನ ಹಣ್ಣಿನಲ್ಲಿ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆದರೆ ದೇಶದಲ್ಲಿ ಎಲ್ಲಿಯೂ ಹಲಸಿನ ಹಣ್ಣಿನಿಂದ ಚಾಕೋಲೆಟ್ ತಯಾರಿಸಲಾಗಿಲ್ಲ. ಹಲಸಿನ ಹಣ್ಣಿನ ಚಾಕೋಲೆಟ್ ಪ್ರಾಯೋಗಿಕ ತಯಾರಿಯನ್ನು ಕಳೆದ 9 ತಿಂಗಳಿನಿಂದ ಪುತ್ತೂರು ಕ್ಯಾಂಪ್ಕೋ ಚಾಕೋಲೆಟ್ ಪ್ಯಾಕ್ಟರಿಯಲ್ಲಿ ನಡೆಸಲಾಗಿದ್ದು, ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಇನ್ನು 1 ಚಾಕೋಲೆಟ್​ಗೆ 2 ರೂ. ದರ ವಿಧಿಸಲಾಗಿದೆ. ಒಂದು ಟನ್ ಚಾಕೋಲೆಟ್ ಉತ್ಪಾದನೆಗೆ 500 ಕೆ.ಜಿ ಹಲಸಿನ ಹಣ್ಣು ಬಳಸಲಾಗಿದೆ. ಇದಕ್ಕೆ ಕೇರಳ ಮತ್ತು ಕರ್ನಾಟಕದ ಹಲಸಿನ ಹಣ್ಣನ್ನು ಬಳಸಲಾಗಿದೆ.

ABOUT THE AUTHOR

...view details