ಕರ್ನಾಟಕ

karnataka

ETV Bharat / city

ಸಿದ್ದರಾಮಯ್ಯ ಗ್ರಹಚಾರ ಸರಿಯಿಲ್ಲ...ಸಿಎಂ ಆಗ್ತಾರೆನ್ನುವುದು ಹಗಲುಗನಸು: ನಳಿನ್ ಕುಮಾರ್ ಕಟೀಲ್ - By-election in Karnataka

ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಳೀನ್​ಕುಮಾರ್​​, ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

BJP state president Nalin kumar katil
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

By

Published : Nov 30, 2019, 12:40 PM IST

ಮಂಗಳೂರು:ಸಿದ್ದರಾಮಯ್ಯ ಹಲವು ಬಾರಿ ಹಗಲುಗನಸು ಕಾಣುತ್ತಿದ್ದಾರೆ. ಕಳೆದ ಬಾರಿ ಚುನಾವಣೆ ನಡೆದಾಗ ನಾನೇ ಸಿಎಂ ಎಂದರು. ಕುಮಾರಸ್ವಾಮಿ ಬಳಿಕ ಮತ್ತೆ ಅದನ್ನೇ ಹೇಳುತ್ತಿದ್ದಾರೆ. ಆದರೆ, ಅವರ ಗ್ರಹಚಾರ ಸರಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​​​ ಬುಗರಿ ಆಡಿಸಿದರೆ ನಾವು ಚಕ್ರ ತಿರುಗಿಸುತ್ತೇವೆ. ಕಾಂಗ್ರೆಸ್, ಜೆಡಿಎಸ್ ನಾಯಕರು​ ಒಂದಾಗಿದ್ದಾರೆ ಎಂದು ಚುನಾವಣೆ ಬಳಿಕ ಕೈ-ದಳ ಮೈತ್ರಿ ಸರ್ಕಾರ ಮಾಡಿಕೊಳ್ಳುತ್ತಾರಾ ಎಂಬ ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಆ ಬಳಿಕ ನಮ್ಮ ಸರ್ಕಾರ ಭದ್ರವಾಗಲಿದ್ದು, ಮುಂದಿನ ಮೂರು ವರ್ಷ ಬಿ.ಎಸ್​.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದರು.

ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಯಡಿಯೂರಪ್ಪ ನಿರುದ್ಯೋಗಿ ಆಗಿದ್ದಾರೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಡಿಸೆಂಬರ್​​ 9ರ ಬಳಿಕ ಉತ್ತರಿಸುತ್ತೇನೆ ಎಂದರು.

ABOUT THE AUTHOR

...view details