ಕರ್ನಾಟಕ

karnataka

ETV Bharat / city

ಹೆಚ್ಚುತ್ತಿರುವ ಜನಸಂಖ್ಯೆ: ಅಧಿಕವಾಗುತ್ತಿದೆ ಸಮಾಧಿ ಜಾಗದ ಕೊರತೆ - Lack of burial space

ಪ್ರತಿಯೊಂದು ಧರ್ಮದಲ್ಲಿಯೂ ಮನುಷ್ಯ ಸಾವನ್ನಪ್ಪಿದ ನಂತರ ಅವರ ಧರ್ಮಕ್ಕನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಆದರೆ, ಇತ್ತೀಚೆಗೆ ಜನಸಂಖ್ಯೆ ಹೆಚ್ಚುತ್ತಿರುವ ರೀತಿಯಲ್ಲೇ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿರುವುದರಿಂದ ಮಂಗಳೂರಿನ ಸೀಮಿತ ಸಮಾಧಿಗಳಲ್ಲಿ ಜಾಗದ ಕೊರತೆ ಉಂಟಾಗುತ್ತಿದೆ.

burial-ground-problem-increasing-in-mangalore
ಹೆಚ್ಚುತ್ತಿರುವ ಜನಸಂಖ್ಯೆ: ಹೆಚ್ಚುತ್ತಿದೆ ಸಮಾಧಿ ಜಾಗದ ಕೊರತೆ

By

Published : Feb 4, 2021, 1:05 PM IST

ಮಂಗಳೂರು: ಜನಸಂಖ್ಯೆಯ ಪ್ರಮಾಣಕ್ಕೆ ತಕ್ಕಂತೆ ಸಾವಿನ ಪ್ರಮಾಣಗಳು ಕೂಡ ಹೆಚ್ಚಳವಾಗುತ್ತಿರುವುದರಿಂದ ಸಮಾಧಿ ಜಾಗದ ಸಮಸ್ಯೆ ಉಂಟಾಗುತ್ತಿದೆ.

ಹೆಚ್ಚುತ್ತಿರುವ ಜನಸಂಖ್ಯೆ: ಹೆಚ್ಚುತ್ತಿದೆ ಸಮಾಧಿ ಜಾಗದ ಕೊರತೆ

ಪ್ರತಿಯೊಂದು ಧರ್ಮದಲ್ಲಿಯೂ ಮನುಷ್ಯ ಸಾವನ್ನಪ್ಪಿದ ನಂತರ ಅವರ ಧರ್ಮದ ನಿಯಮಾನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಆದರೆ, ಇತ್ತೀಚೆಗೆ ಜನಸಂಖ್ಯೆ ಹೆಚ್ಚುತ್ತಿರುವ ರೀತಿಯಲ್ಲೇ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿರುವುದರಿಂದ ಸೀಮಿತ ಸಮಾಧಿಗಳಲ್ಲಿ ಜಾಗದ ಕೊರತೆ ಉಂಟಾಗುತ್ತಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ವಿದ್ಯುತ್ ಚಿತಾಗಾರ ಬಳಕೆಯಾಗುತ್ತಿರುವುದು ಭವಿಷ್ಯದಲ್ಲಿ ಜಾಗದ ಕೊರತೆ ಸೃಷ್ಟಿಸಲಾರದು ಎಂಬ ವಿಶ್ವಾಸ ಹೊಂದಲಾಗಿದೆ.

ಆದರೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಧಪನ್​ ಮಾಡುವುದರಿಂದ ಜಾಗದ ಕೊರತೆಯು ಸೃಷ್ಟಿಯಾಗುತ್ತಿದೆ. ಮುಸ್ಲಿಂ ಸಮುದಾಯದಲ್ಲಿ ಮೃತರ ಅಂತ್ಯಕ್ರಿಯೆ ಮಸೀದಿಗೆ ಸೇರಿದ ಜಾಗದಲ್ಲಿ ನಡೆಯುತ್ತಿದ್ದು, ಇತ್ತೀಚೆಗೆ ಮಂಗಳೂರಿನ ಕೆಲ ಪ್ರದೇಶಗಳಲ್ಲಿ ಜಾಗದ ಕೊರತೆ ಸೃಷ್ಟಿಯಾಗುತ್ತಿದೆ. ಇದಕ್ಕಾಗಿ ಹೊಸ ಭೂಮಿಗಾಗಿ ಕೆಲವು ಮಸೀದಿ ವ್ಯಾಪ್ತಿಯಲ್ಲಿ ಸಮುದಾಯದ ನಾಯಕರು ಪ್ರಯತ್ನಪಡುತ್ತಿದ್ದಾರೆ.

ಓದಿ:ಯೋಗೇಶ್​ ಗೌಡ ಹತ್ಯೆ ಪ್ರಕರಣ: ವಿನಯ ಕುಲಕರ್ಣಿಗೆ ಸದ್ಯಕ್ಕಿಲ್ಲ ರಿಲೀಫ್

ಇನ್ನೂ ಕ್ರಿಶ್ಚಿಯನ್ ಧರ್ಮದಲ್ಲಿಯೂ ಚರ್ಚ್​ನ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಇಲ್ಲಿಯೂ ಜಾಗದ ಕೊರತೆ ಸೃಷ್ಟಿಯಾಗುತ್ತಿದೆ. ಒಟ್ಟಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಜೊತೆಗೆ ಹೆಚ್ಚುತ್ತಿರುವ ಸಾವಿನ ಪ್ರಮಾಣದಿಂದ ಅಂತ್ಯಸಂಸ್ಕಾರಕ್ಕಾಗಿ ಜಾಗದ ಕೊರತೆಗಳು ಸೃಷ್ಟಿಯಾಗುತ್ತಿದೆ.

ABOUT THE AUTHOR

...view details