ಕರ್ನಾಟಕ

karnataka

ETV Bharat / city

ಬಾಲಕನಿಗೆ ಮೂಳೆ ಕ್ಯಾನ್ಸರ್​: ಶಸ್ತ್ರಚಿಕಿತ್ಸೆಗಾಗಿ ಭುಜ, ತೋಳು ತೆಗೆದು ಮತ್ತೆ ಜೋಡಿಸಿದ ಮಂಗಳೂರು ವೈದ್ಯರು - bone cancer treatment success

ಮೂಳೆ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಬಾಲಕ ಕೈಯ್ಯನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ. ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಆತನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

bone cancer treatment success
ಮೂಳೆ ಕ್ಯಾನ್ಸರ್​ಗೆ ಚಿಕಿತ್ಸೆ ನೀಡಿದ ವೈದ್ಯರು

By

Published : May 27, 2020, 12:17 PM IST

ಮಂಗಳೂರು: ಮೂಳೆ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಇಲ್ಲಿನ ಇಂಡಿಯಾನ ಆಸ್ಪತ್ರೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ಬಾಲಕ ತೋಳು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ. ತಪಾಸಣೆ ನಡೆಸಿದಾಗ ಈತನಿಗೆ ಸಂಪೂರ್ಣ ತೋಳು ಹಾಗೂ ಭುಜದ ಮೂಳೆಯಲ್ಲಿ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಮೂಳೆ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞ ಡಾ.ನವನೀತ್ ಎಸ್ ಕಾಮತ್ ಅವರು ಶಸ್ತ್ರಚಿಕಿತ್ಸೆ ನಡೆಸಿದರು.

ವೈದ್ಯರ ಮಾತು

10 ವಾರಗಳ ಕಾಲ ಕಿಮೋ ಥೆರಪಿ ಮಾಡಲಾಯಿತು. ಈ ಶಸ್ತ್ರಚಿಕಿತ್ಸೆ ಸಾಮಾನ್ಯವಾಗಿರಲಿಲ್ಲ. ರಾಜ್ಯದಲ್ಲಿ ಇದು ಅಪರೂಪದ ಪ್ರಕರಣ. ಬಾಲಕನ ಸಂಪೂರ್ಣ ತೋಳಿನ ಮೂಳೆ ಹಾಗೂ ಭುಜವನ್ನು ಶಸ್ತ್ರಕ್ರಿಯೆ ಮೂಲಕ ತೆಗೆದು 194° ಡಿಗ್ರಿ ಸೆಲ್ಸಿಯಸ್​​​​ನಲ್ಲಿ ದ್ರವ ಸಾರಜನಕ ಬಳಸಿ ಗೆಡ್ಡೆಯ ಕೋಶಗಳನ್ನು ಸಂಪೂರ್ಣ ನಾಶಪಡಿಸಲಾಯಿತು.

ಬಳಿಕ ಮೂಳೆಯನ್ನು ಬಾಲಕನಿಗೆ ಜೋಡಿಸಲಾಯಿತು. ಸುಮಾರು 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈಗ ಬಾಲಕ ಯಾವುದೇ ತೊಂದರೆಯಿಲ್ಲದೆ ಚೇತರಿಸಿಕೊಂಡಿದ್ದಾನೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಕೈಯನ್ನೆ ಕತ್ತರಿಸುವ ಸಂಭವ ಎದುರಾಗುತ್ತದೆ ಎನ್ನುತ್ತಾರೆ ವೈದ್ಯರು.

ABOUT THE AUTHOR

...view details