ಕರ್ನಾಟಕ

karnataka

ETV Bharat / city

ತಣ್ಣೀರುಬಾವಿ ಕಡಲತೀರದಲ್ಲಿ ದೋಣಿ ಮುಳುಗಡೆ.. 9ಮೀನುಗಾರರ ರಕ್ಷಣೆ! - ಮಂಗಳೂರಿನ ಪ್ರವಾಸಿ ತಾಣ

ತಣ್ಣೀರುಬಾವಿ ಕಡಲತೀರ ಸಮೀಪ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ 9 ಮಂದಿಯನ್ನು ಸ್ಥಳೀಯ ದೋಣಿಯಲ್ಲಿದವರು ರಕ್ಷಿಸಿದ್ದಾರೆ.

ದಡಕ್ಕೆ ತಂದಿರುವ ದೋಣಿ

By

Published : Aug 3, 2019, 11:23 PM IST

ಮಂಗಳೂರು:ನಗರದ ಹೊರವಲಯದ ತಣ್ಣೀರುಬಾವಿ ಕಡಲತೀರ ಸಮೀಪ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ 9 ಮಂದಿಯನ್ನು ಸ್ಥಳೀಯ ದೋಣಿಯಲ್ಲಿದ್ದವರು ರಕ್ಷಿಸಿದ್ದಾರೆ.

ಶಬ್ಬೀರ್, ನಾಸೀರ್, ರಿಯಾಝ್, ಆಶಿಕ್, ಲಕ್ಷ್ಮಣ್, ಎಲ್.ಆರ್.ರಾವ್, ಕೃಷ್ಣ, ಗುರು ಬೋಟ್‌ನಲ್ಲಿದ್ದವರು. ಇಂದು ಬೆಳಗ್ಗೆ 7.45ಕ್ಕೆ ಸಹಿತ್ಲು ಶಬೀರ್ ಮಾಲೀಕತ್ವದ ‘ಶಬ್ಬೀರ್’ ದೋಣಿಯಲ್ಲಿ ಮೀನುಗಾರರು ತಣ್ಣೀರುಬಾವಿ ಕಡಲತೀರ ಸಮೀಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಈ ವೇಳೆ ಗಾಳಿ ಹೆಚ್ಚಾಗಿ ಸಮುದ್ರಗಳ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯು ಮಗುಚಿ ಬಿತ್ತು.

ಅಪಾಯದ ಸ್ಥಿತಿಯಲ್ಲಿದ್ದ 9 ಮೀನುಗಾರರನ್ನು ‘ಸುವರ್ಣ ಕುಸುಮ’ ಹಾಗೂ ‘ಶ್ರೀರಾಮ’ ದೋಣಿಯ ಮೀನುಗಾರರು ಕಂಡು ರಕ್ಷಿಸಿ ಸ್ಥಳೀಯರ ಸಹಕಾರದಿಂದ ದೋಣಿಯನ್ನು ಸಮುದ್ರದ ದಡಕ್ಕೆ ಎಳೆದು ತಂದರು. ದೋಣಿ ಮಗುಚಿದಾಗ ಎಂಜಿನ್ ಕಿತ್ತು ಮತ್ತು ಮೀನುಗಳಿಗೆ ಗಾಳ ಹಾಕಿದ್ದ ಬಲೆಯೂ ನೀರು ಪಾಲಾಗಿದೆ. ದೋಣಿಯಲ್ಲಿದ್ದ ಮೀನುಗಾರರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details