ಮಂಗಳೂರು:ಇಲ್ಲಿನ ಸಮುದ್ರ ತೀರದಲ್ಲಿ ಬೋಟ್ ಇಂಜಿನ್ನಲ್ಲಿ ಉಂಟಾದ ದೋಷದಿಂದ ಅಪಾಯಕ್ಕೆ ಸಿಲುಕಿದ್ದ 10 ಮಂದಿ ತಮಿಳುನಾಡು ಮೀನುಗಾರರನ್ನು ರಕ್ಷಿಸಲಾಗಿದೆ.
ಬೋಟ್ ಇಂಜಿನ್ನಲ್ಲಿ ದೋಷ: ಮಂಗಳೂರಲ್ಲಿ ಅಪಾಯಕ್ಕೆ ಸಿಲುಕಿದ್ದ 10 ಮಂದಿ ಮೀನುಗಾರರ ರಕ್ಷಣೆ - guard staff rescued 10 tamil nadu fishermen ,
ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಾಜಧೂತ್ ಹಡಗಿನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. 10 ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ, ಇಂಜಿನ್ ದೋಷಕ್ಕೊಳಗಾದ ಬೋಟನ್ನು ನವಮಂಗಳೂರು ಬಂದರ್ಗೆ ಎಳೆದುತಂದು ಮೀನುಗಾರಿಕಾ ಇಲಾಖೆಯ ಸ್ವಾಧೀನಕ್ಕೆ ನೀಡಿದ್ದಾರೆ.
ಇಂಜಿನ್ನಲ್ಲಿ ದೋಷ ಅಪಾಯಕ್ಕೆ ಸಿಲುಕಿದ ಬೋಟ್
ತಮಿಳುನಾಡಿನ ಲಾರ್ಡ್ ಆಫ್ ಓಷಿಯನ್ ಬೋಟ್ ನಲ್ಲಿ ಮೀನುಗಾರಿಕೆಗೆ ಬಂದಿದ್ದ ವೇಳೆ, ಮಂಗಳೂರು ಸಮೀಪ ಅದರ ಇಂಜಿನ್ ನಲ್ಲಿ ದೋಷ ಕಾಣಿಸಿಕೊಂಡಿತ್ತು. ಇಂಜಿನ್ ದೋಷದಿಂದ ಬೋಟ್ ನಲ್ಲಿದ್ದ 10 ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಾಜಧೂತ್ ಹಡಗಿನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. 10 ಮೀನುಗಾರರನ್ನು ರಕ್ಷಿಸಿದ ಸಿಬ್ಬಂದಿ, ಇಂಜಿನ್ ದೋಷಕ್ಕೊಳಗಾದ ಬೋಟನ್ನು ನವಮಂಗಳೂರು ಬಂದರ್ಗೆ ಎಳೆದು ತಂದು ಮೀನುಗಾರಿಕಾ ಇಲಾಖೆಯ ಸ್ವಾಧೀನಕ್ಕೆ ನೀಡಿದ್ದಾರೆ.