ಕರ್ನಾಟಕ

karnataka

ETV Bharat / city

ಪಂಚರಾಜ್ಯ ಚುನಾವಣೆಯಲ್ಲಿ ಜನ ಕಾಂಗ್ರೆಸ್​ ತಿರಸ್ಕರಿಸಿರುವುದು ಸ್ಪಷ್ಟವಾಗಿದೆ : ನಳಿನ್ ಕುಮಾರ್ ಕಟೀಲು - ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಕುರಿತು ಮಾತನಾಡಿದ ಕಟೀಲ್

ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಬೆಳಗಾವಿಯಲ್ಲಿ 50 ಪ್ರತಿಶತ ಮತ ಎಣಿಕಾ ಕಾರ್ಯ ನಡೆದಿದೆ. ಸಂಜೆಯ ವೇಳೆಗೆ ಅಲ್ಲಿಯೂ ವಿಜಯ ಸಾಧಿಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಹೇಳಿದ್ದಾರೆ. ಇದೇ ವೇಳೆ ಪಂಚರಾಜ್ಯ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್​ಅನ್ನು ತಿರಸ್ಕರಿಸುವುದು ಸ್ಪಷ್ಟವಾಗಿದೆ ಎಂದಿದ್ದಾರೆ.

Nalin Kumar Kateel
Nalin Kumar Kateel

By

Published : May 2, 2021, 3:56 PM IST

Updated : May 2, 2021, 8:09 PM IST

ಮಂಗಳೂರು: ದೇಶದಲ್ಲಿ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಕಾಂಗ್ರೆಸ್ ಎಲ್ಲಾ ಕಡೆಗಳಲ್ಲಿ ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ. ಈ ಮೂಲಕ ಇಡೀ ದೇಶದಲ್ಲಿ ಕಾಂಗ್ರೆಸನ್ನು ಜನರು ತಿರಸ್ಕರಿಸಿರುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು​ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಅಸ್ಸೋಂನಲ್ಲಿ ಎರಡನೇಯ ಬಾರಿ ಅಧಿಕಾರ ಉಳಿಸುವ ಪ್ರಯತ್ನ ಮಾಡಿದೆ. ಪುದುಚೇರಿಯಲ್ಲಿ ಮೊದಲ ಬಾರಿಗೆ ಶೂನ್ಯದಿಂದ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ಚುನಾವಣಾ ಫಲಿತಾಂಶದ ಪ್ರಕಾರ ಶೇಕಡಾವಾರು ಬಿಜೆಪಿಗೆ ಅತೀ ಹೆಚ್ಚು ಮತಗಳು ಲಭ್ಯವಾಗುತ್ತಿವೆ ಎಂದು ಹೇಳಿದರು.

ಪಂಚರಾಜ್ಯ ಚುನಾವಣೆಯಲ್ಲಿ ಜನ ಕಾಂಗ್ರೆಸ್​ ತಿರಸ್ಕರಿಸಿರುವುದು ಸ್ಪಷ್ಟವಾಗಿದೆ : ನಳಿನ್ ಕುಮಾರ್ ಕಟೀಲು

ರಾಜ್ಯದ ಬಸವಕಲ್ಯಾಣದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಬೆಳಗಾವಿಯಲ್ಲಿ 50 ಪ್ರತಿಶತ ಮತ ಎಣಿಕಾ ಕಾರ್ಯ ನಡೆದಿದೆ. ಸಂಜೆಯ ವೇಳೆಗೆ ಅಲ್ಲಿಯೂ ವಿಜಯ ಸಾಧಿಸುವ ನಂಬಿಕೆಯಿದೆ. ಈ ಮೂಲಕ ಇಡೀ ದೇಶದಲ್ಲಿ ಬಿಜೆಪಿ ಅತಿಹೆಚ್ಚು ಮತ ಪಡೆಯುವ ಮೂಲಕ ಜನರ ಒಲವು ಪಡೆಯುವ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಕೇರಳದಲ್ಲಿ ಒಂದು ಸ್ಥಾನವಿದ್ದ ನಾವು ಈ ಬಾರಿ‌ ಮೂರು ಸ್ಥಾನಗಳಿಂದ ಮುಂದೆ ಇದ್ದೇವೆ. ಸಂಜೆಯ ಒಳಗೆ ಫಲಿತಾಂಶ ಉತ್ತಮವಾಗಿದ್ದಲ್ಲಿ ಇನ್ನಷ್ಟು ಸ್ಥಾನ ಗಳಿಸುವ ನಿರೀಕ್ಷೆಯಿದೆ. ‌ಎಲ್ಲಾ ಕಡೆಗಳಲ್ಲಿ ಗೆಲುವು ಸಾಧಿಸಲು ನಾವು ಪ್ರಯತ್ನ ಪಟ್ಟಿದ್ದು, ಮಸ್ಕಿಯಲ್ಲಿ ಮಾತ್ರ ಸೋಲಾಗಿದೆ. ಈ ಸೋಲಿನ ಕಾರಣವನ್ನು ಮುಂದಿನ ದಿನಗಳಲ್ಲಿ ಅವಲೋಕನ ಮಾಡಲಿದ್ದೇವೆ. ನಿರೀಕ್ಷೆಯಂತೆ ಬಿಜೆಪಿ 10 ಸಾವಿರ ಮತಗಳ ಅಂತರದಿಂದ ಮಸ್ಕಿಯಲ್ಲಿ ಗೆಲುವು ಸಾಧಿಸಬೇಕಿತ್ತು.‌ ಆದರೆ ಕಾರಣಾಂತರಗಳಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದರು.

ಮೂರು ಅವಧಿಗೆ ಶಾಸಕರಾಗಿರುವ, ಬಿಜೆಪಿಯನ್ನು ಪ್ರವೇಶಿಸಿರುವ ಪ್ರತಾಪ್ ಗೌಡರಿಗೆ ಅಲ್ಲಿ ಅಭ್ಯರ್ಥಿ ಸ್ಥಾನ ನೀಡಲಾಗಿತ್ತು. ಅವರೇ ಗೆಲುವು ಸಾಧಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಸೋಲು ಅನುಭವಿಸಿದ್ದಾರೆ. ಈ ಸೋಲನ್ನು ಸ್ವೀಕಾರ ಮಾಡುತ್ತೇವೆ ಎಂದು ನಳಿನ್ ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಿಯೂ ಚುನಾವಣಾ ಸಂಭ್ರಮಾಚರಣೆ ಬೇಡ. ಯಾವುದೇ ಸಂಭ್ರಮಾಚರಣೆ, ಸಭೆಗಳನ್ನು ನಡೆಸದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಗೆಲುವಿನ ಸಂಭ್ರಮವನ್ನು ಮನಸ್ಸಿನಲ್ಲಿಯೇ ಆಚರಣೆ ಮಾಡಿ, ಯಾರಾದರೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು‌ ಮುಂದಾಗಿ ಎಂದು ‌ನಳಿನ್ ಕುಮಾರ್ ಕಟೀಲು ಅವರು ಕಾರ್ಯಕರ್ತರಲ್ಲಿ ವಿನಂತಿಸಿದರು.

Last Updated : May 2, 2021, 8:09 PM IST

For All Latest Updates

ABOUT THE AUTHOR

...view details