ಮಂಗಳೂರು:ರಾಹುಲ್ ಗಾಂಧಿ (Congress leader Rahul Gandhi) ಓರ್ವ ಪಾರ್ಟ್ ಟೈಂ ರಾಜಕಾರಣಿ. ಅವರು ಎಲ್ಲೋ ಕುಳಿತುಕೊಂಡು ಟ್ವೀಟ್ ಮಾಡುತ್ತಾರೆ. ಅದು ಎಲ್ಲಿಯದ್ದೆಂದು ಗೊತ್ತಾಗಲ್ಲ. ಅವರಿಗೆ ರಾಜಕೀಯ ಅನುಭವವಿಲ್ಲ ಎಂದು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BJP national general secretary B.L. Santhosh) ಹೇಳಿದರು.
ನಗರದ ಕೊಡಿಯಾಲಬೈಲ್‌ನ ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ ರಾಜ್ಯ ಪ್ರಕೋಷ್ಠ ಚಿಂತನ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಮಾನಸಿಕತೆಯಿಂದ ದೇಶವನ್ನು ಮುಕ್ತ ಮಾಡುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ನಮ್ಮ ಗುರಿಯೇ ಹೊರತು ಕಾಂಗ್ರೆಸ್ ಪಕ್ಷವನ್ನು ಮುಕ್ತ ಮಾಡೋದಲ್ಲ. ಆದ್ದರಿಂದ ಸಮರ್ಥವಾಗಿ ಕೆಲಸ ಮಾಡುವ ವಿರೋಧಪಕ್ಷದ ಅವಶ್ಯಕತೆಯಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿರುವುದು.. ಕಾಂಗ್ರೆಸ್ ಭಾರತವನ್ನು ಭಿಕ್ಷೆ ಬೇಡುವ ದೇಶವನ್ನಾಗಿ ಮಾಡಿತು :ಕಾಂಗ್ರೆಸ್‌ನವರು ಭಾರತವನ್ನು ಭಿಕ್ಷೆ ಬೇಡುವ ದೇಶವನ್ನಾಗಿ ಮಾಡಿದರು. ಪುರುಸೊತ್ತಿನಲ್ಲಿ ರಾಜಕೀಯ, ಆಡಳಿತ ಮಾಡಿದರೆ ಹೇಗಿರುತ್ತೋ ಹಾಗಿತ್ತು ನಮ್ಮ ದೇಶ. ಆದ್ದರಿಂದ ಪ್ರಧಾನಿ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಈ ದೇಶದ ಬಹುತೇಕ ಯೋಚನೆಗಳಿಗೆ ವಿರುದ್ಧವಾದ ಚಿಂತನೆ ಹೊಂದಿತ್ತು. ಈ ಚಿಂತನೆಯನ್ನು ರಾಜಕೀಯ ವ್ಯವಸ್ಥೆಯಿಂದ ದೂರೀಕರಿಸಲು ಬಿಜೆಪಿ ಈ ಆಂದೋಲನವನ್ನು ಮಾಡಿತು. ಬಿಜೆಪಿ ಒಂದು ರಾಜಕೀಯ ಪಕ್ಷ ಮಾತ್ರವಲ್ಲ ರಾಷ್ಟ್ರೀಯ ಚಿಂತನೆ ಎಂದರು.
ನಮಗೆ ಸರ್ವಮತದ ಅವಶ್ಯಕತೆ ಇದೆ :ಲೋಕಸಭೆ, ವಿಧಾನಸಭೆ, ಮನಪಾ, ಗ್ರಾಪಂ ಚುನಾವಣೆ ಮಟ್ಟಕ್ಕೆ ಬಹುಮತ ಸಾಕಾಗಬಹುದು. ಆದರೆ, ಬಿಜೆಪಿಗೆ ಬಹುಮತ ಸಾಕಾಗುವುದಿಲ್ಲ. ನಮಗೆ ಸರ್ವಮತದ ಅವಶ್ಯಕತೆ ಇದೆ. ಸರ್ವಮತವೆಂದ ಬಳಿಕ ಸರ್ವವ್ಯಾಪಿ, ಸರ್ವಗ್ರಾಹಿ, ಸರ್ವಸ್ಪರ್ಶಿಯಾಗಬೇಕು. ನಮ್ಮ ದೇಶವನ್ನು ಸಮಾಜವನ್ನು ಪಶ್ಚಿಮದ, ಪೂರ್ವದ ಅಂಚಿನಲ್ಲಿ ಎರಕಹೊಯ್ಯುವ ಕೆಟ್ಟ ಪರಂಪರೆಯನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ.
ಅದರ ವಿರುದ್ಧದ ರಾಜಕೀಯ ಆಂದೋಲನವಾಗಿ ಬಿಜೆಪಿಯು ಈ ನೆಲದ ಮಣ್ಣಿನ ಗುಣದ ಆಧಾರದ ಮೇಲೆ ಈ ದೇಶದ ಸಂಸ್ಕೃತಿಯ ಆಧಾರದ ಮೇಲೆ ಈ ದೇಶದ ಆಡಳಿತ ರಂಗವನ್ನು ವಿಕಾಸಗೊಳಿಸಬೇಕೆಂಬ ಬಹುದೊಡ್ಡ ಆಕಾಂಕ್ಷೆಯನ್ನು ಹೊಂದಿದೆ ಎಂದರು.
ಓದಿ:ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಚಿನ್ನ ಲೇಪಿತ ಫೋಟೋ ಗಿಫ್ಟ್ ನೀಡಿದ ಕಾಂಗ್ರೆಸ್ ಮುಖಂಡ
ಗಾಂಧೀಜಿಯವರ ಹೆಸರಿನಲ್ಲಿ ಕಾಂಗ್ರೆಸ್ ಅಂಗಡಿ:
ಗಾಂಧೀಜಿಯವರ (Mahatma Gandhiji) ಹೆಸರಿನಲ್ಲಿ ಕಾಂಗ್ರೆಸ್ ಅಂಗಡಿ ಹಾಕಿಕೊಂಡಿದೆ. ಅದೇ ರೀತಿ ಗಾಂಧೀಜಿಯವರ ವಿಚಾರದಲ್ಲಿ ಅತ್ಯಂತ ಪಾಪ ಮಾಡಿದವರು ಯಾರಾದರೂ ಇದ್ದರೆ ಅದು ಕಾಂಗ್ರೆಸ್ಸಿಗರು. ಸಿದ್ದರಾಮಯ್ಯನವರು ಬಿಜೆಪಿಗರು ಎಷ್ಟು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದ್ದಾರೆ ಎಂದು ಕೇಳುತ್ತಾರೆ. ಅಂದು ನಾವು ಹುಟ್ಟಿರಲಿಲ್ಲ. ಹಾಗಾಗಿ, ನಾವು ಬಲಿದಾನಗೈದಿಲ್ಲ. ಬಲಿದಾನ ಮಾಡಲು ಅವಕಾಶ ಸಿಕ್ಕಿದಾಗ ನಮ್ಮ ಸಂಘಟನೆಯವರು ಮಾಡಿದಷ್ಟು ಇನ್ನಾರು ಮಾಡಿಲ್ಲ ಎಂದು ಹೇಳಿದರು.
ಬಿಜೆಪಿಗೆ ತನ್ನ ಚಿಂತನೆಯ ಬಗ್ಗೆ ಸ್ಪಷ್ಟ ಅರಿವಿದೆ :ಬಿಜೆಪಿಗೆ ತನ್ನ ಚಿಂತನೆಯ ಬಗ್ಗೆ ಸ್ಪಷ್ಟ ಅರಿವು ಇದೆ. ಹಾಗಾಗಿಯೇ ಬಿಜೆಪಿ ಪಕ್ಷ 70 ವರ್ಷದ ಹಿಂದೆ ಯಾವ ಉತ್ತಮ ಚಿಂತನೆಯಿರಿಸಿ ಆರಂಭವಾಯಿತೋ, ಆ ಒಳ್ಳೆಯ ಪದ್ಧತಿ ಇವತ್ತಿನವರೆಗೂ ಹಾಗೆಯೇ ಇದೆ ನಮ್ಮಲ್ಲಿ. ಜನ್ಧನ್ ಖಾತೆ ಆರಂಭವಾದಾಗ 0 ಬ್ಯಾಲೆನ್ಸ್ ಖಾತೆ ಎಂದು ಎಲ್ಲರೂ ಹಾಸ್ಯ ಮಾಡಿದ್ದರು.
ಆದರೆ, ಇಂದು ದೇಶದ 42 ಕೋಟಿ ಜನ್ಧನ್ ಖಾತೆಯಲ್ಲಿ ವರ್ಷಕ್ಕೆ ಕೇಂದ್ರ ಸರಕಾರದ 3.45 ಲಕ್ಷ ಕೋಟಿ ರೂ. ಹಣ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್ ಮೂಲಕ ವರ್ಗಾವಣೆ ಆಗುತ್ತದೆ ಎಂದು ಹೇಳಿದರು.
ಪ್ರಶಸ್ತಿ ವಾಪಸಿ ಎಂದು ಈಗ ಯಾರೂ ಹೇಳುತ್ತಿಲ್ಲ:ಪ್ರಶಸ್ತಿ ವಾಪಸಿ ಎಂದು ಈಗ ಯಾರೂ ಹೇಳುತ್ತಿಲ್ಲ. ಯಾಕೆಂದರೆ, ಈಗ ಪ್ರಶಸ್ತಿ ಪಡೆದುಕೊಂಡವರು ಪರಿಶ್ರಮ ಪಟ್ಟು ಪಡೆದುಕೊಂಡವರು. ಬಾಲಿವುಡ್ ಮಂದಿ ಹಿಂದತ್ವದ ವಿರೋಧ, ದೇಶ ವಿರೋಧದ ಹೇಳಿಕೆ ನೀಡುತ್ತಿದ್ದರು. ಆದರೆ, ಜನರು ಈಗ ತಪ್ಪು ಯಾವುದು ಸರಿ ಯಾವುದು ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ವಿವೇಚನೆ ಬೆಳೆಸಿಕೊಂಡಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಂತ್ಯೋದಯ, ಸರ್ವೋದಯ ಹಾಗೂ ರಾಮರಾಜ್ಯ ಈ ಮೂರು ಪದಗಳು ಅತ್ಯಂತ ಶ್ರೇಷ್ಠವಾಗಿದ್ದು ಈ ಮೂರೂ ಪದಗಳನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಮೂರರ ಬಗ್ಗೆಯೂ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಓದಿ:Bitcoin Scam : ಪ್ರಧಾನಿ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಹೋಗಿರದಿದ್ದರೆ ಬಹುಶಃ ಹಗರಣ ಬೆಳಕಿಗೆ ಬರುತ್ತಿರಲಿಲ್ಲ: ಹೆಚ್ಡಿಕೆ