ಕರ್ನಾಟಕ

karnataka

ETV Bharat / city

ನಗರಕ್ಕೆ ಬಂದ ಕಾಡುಕೋಣ ಹೃದಯಾಘಾತದಿಂದ ಸಾವು.. ಮರಣೋತ್ತರ ವರದಿಯಲ್ಲಿ ಬಯಲು

ಮರಣೋತ್ತರ ಪರೀಕ್ಷೆ ವರದಿ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿಗೆ ನೀಡಲಾಗಿದೆ. ಮಂಗಳೂರು ಅರಣ್ಯ ಇಲಾಖೆಗೆ ತಲುಪಿದ ಬಳಿಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ದ.ಕ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ತಿಳಿಸಿದ್ದಾರೆ.

bison Death from  heart attack...Clarified by postmortem examination
ನಗರಕ್ಕೆ ಬಂದ ಕಾಡುಕೋಣ ಹೃದಯಾಘಾತದಿಂದ ಸಾವು..ಮರಣೋತ್ತರ ವರದಿಯಿಂದ ಸ್ಪಷ್ಟನೆ

By

Published : May 9, 2020, 2:05 PM IST

ಮಂಗಳೂರು :ಇತ್ತೀಚೆಗೆ ಮಂಗಳೂರು ನಗರಕ್ಕೆ ಬಂದು ಆತಂಕ ಸೃಷ್ಟಿಸಿದ್ದ ಕಾಡುಕೋಣ ಹಿಡಿದು ಚಾರ್ಮಾಡಿಗೆ ಕೊಂಡೊಯ್ಯುವಾಗ ಸಾವನ್ನಪ್ಪಿತ್ತು. ಅದರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅದು ಹೃದಯಾಘಾತದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಕೆಲ ದಿನಗಳ ಹಿಂದೆ ಮಂಗಳೂರು ನಗರದಲ್ಲಿ ಸೆರೆಸಿಕ್ಕ ಕಾಡುಕೋಣವನ್ನ ಚಾರ್ಮಾಡಿಗೆ ಬಿಡಲು ಕೊಂಡೊಯ್ಯುಲಾಗಿತ್ತು. ಈ ವೇಳೆ ಕಾಡುಕೋಣ ಸಾವನ್ನಪ್ಪಿತ್ತು. ಇದಕ್ಕೆ ಅರಣ್ಯ ಇಲಾಖೆಯವರು ಕಾರ್ಯಾಚರಣೆ ವೇಳೆ ನೀಡಿದ ಅರಿವಳಿಕೆ‌ ಹೆಚ್ಚಳ ಕಾರಣ ಎಂದು ಆರೋಪ ಕೇಳಿ ಬಂದಿತ್ತು. ಮೃತ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಿದ ಚಾರ್ಮಾಡಿಯ ಸರ್ಕಾರಿ ವೈದ್ಯರು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿಗೆ ನೀಡಲಾಗಿದೆ. ಮಂಗಳೂರು ಅರಣ್ಯ ಇಲಾಖೆಗೆ ತಲುಪಿದ ಬಳಿಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ದ.ಕ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ತಿಳಿಸಿದ್ದಾರೆ.

ABOUT THE AUTHOR

...view details