ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ತೆಂಕಿಲ-ಪರ್ಲಡ್ಕ ಬೈಪಾಸ್ ರಸ್ತೆಯ ಶಿವನಗರ ಎಂಬಲ್ಲಿ ನಿನ್ನೆ ಬೈಕ್ ಮತ್ತು ಜೀಪ್ ನಡುವೆ ಢಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ.
ಬೈಕ್-ಜೀಪ್ ನಡುವೆ ಢಿಕ್ಕಿ, ಓರ್ವ ಸಾವು - ಬೈಕ್ ಮತ್ತು ಜೀಪ್ ನಡುವೆ ಡಿಕ್ಕಿ
ರಾತ್ರಿ ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಗಿರಿಯಪ್ಪ ಗೌಡ ಮತ್ತು ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ..
ಬೈಕ್-ಜೀಪ್ ನಡುವೆ ಡಿಕ್ಕಿ
ಪರ್ಲಡ್ಕದ ಮೊಹಮ್ಮದ್ ಹಾಸೀಂ (19) ಸಾವನ್ನಪ್ಪಿದ ಯುವಕ. ಘಟನೆಯಿಂದಾಗಿ ಬೈಕ್ ಸವಾರ ಹಾಸೀಂ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಇನ್ನು ರಾತ್ರಿ ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಗಿರಿಯಪ್ಪ ಗೌಡ ಮತ್ತು ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಸೀಂ ಸಾವಿನ ಹಿನ್ನೆಲೆ ಇಂದು ಪುತ್ತೂರಿನಲ್ಲಿ ಹಸಿಮೀನು ವ್ಯಾಪಾರ ಇರುವುದಿಲ್ಲ ಎಂದು ಹಸಿಮೀನು ವ್ಯಾಪಾರಸ್ಥರ ಸಂಘ ತಿಳಿಸಿದೆ.