ಪುತ್ತೂರು: ಬೈಕ್ ಹಾಗೂ ರಿಕ್ಷಾ ನಡುವೆ ಅಪಘಾತ ಸಂಭವಿಸಿ ಕಾಲೇಜ್ ವಿದ್ಯಾರ್ಥಿ ಮೃತಪಟ್ಟ ಘಟನೆ ಪುತ್ತೂರು ನಗರದ ಹೊರವಲಯ ಮುರದಲ್ಲಿ ನಡೆದಿದೆ.
ಬೈಕ್-ಆಟೋ ರಿಕ್ಷಾ ನಡುವೆ ಅಪಘಾತ: ವಿದ್ಯಾರ್ಥಿ ಸಾವು - ಪುತ್ತೂರು ಬೈಕ್ ಆಟೋರಿಕ್ಷಾ ಅಪಘಾತ
ಸುಳ್ಯದ ಕೆ.ವಿ.ಜಿ ಕಾಲೇಜ್ ವಿದ್ಯಾರ್ಥಿ, ಬನ್ನೂರು ನಿವಾಸಿ ಅಭಿನವ್ (18) ಮೃತ ವಿದ್ಯಾರ್ಥಿ. ಪುತ್ತೂರಿನಿಂದ ಕೆದಿಲಕ್ಕೆ ಹೋಗುವ ರಸ್ತೆಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ.
ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ
ಸುಳ್ಯದ ಕೆ.ವಿ.ಜಿ ಕಾಲೇಜ್ ವಿದ್ಯಾರ್ಥಿ, ಬನ್ನೂರು ನಿವಾಸಿ ಅಭಿನವ್ (18) ಮೃತ ವಿದ್ಯಾರ್ಥಿ. ಪುತ್ತೂರಿನಿಂದ ಕೆದಿಲಕ್ಕೆ ಹೋಗುವ ರಸ್ತೆಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ.
ಅಭಿನವ್ ಕಬಕ ಕಡೆಯಿಂದ ಪುತ್ತೂರಿಗೆ ಬೈಕ್ ಮೇಲೆ ಹೊರಟಿದ್ದಾಗ ಕೆದಿಲ ಕಡೆ ಹೋಗಲು ರಸ್ತೆ ದಾಟುತಿದ್ದ ಅಟೋ ರಿಕ್ಷಾಗೆ ಬೈಕ್ ಡಿಕ್ಕಿಯಾಗಿದೆ. ಅಪಘಾತದಲ್ಲಿ ಅಭಿನವ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.