ಕರ್ನಾಟಕ

karnataka

ETV Bharat / city

ಮದುವೆ ವಾರ್ಷಿಕೋತ್ಸವ ದಿನದಂದು ಅಪಘಾತ : ಪತ್ನಿ ಸಾವು, ಗಂಡ-ಮಕ್ಕಳು ಪ್ರಾಣಾಪಾಯದಿಂದ ಪಾರು!

ಮದುವೆ ವಾರ್ಷಿಕೋತ್ಸವ ದಿನದಂದು ದೇವಸ್ಥಾನಕ್ಕೆ ತೆರಳಿದ್ದ ದಂಪತಿ ಬೈಕ್​ ಪಲ್ಟಿಯಾಗಿದ್ದು, ಬೈಕ್​ ಹಿಂಬದಿ ಕುಳಿತುಕೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ..

Bike accident survivor Woman died, survivor Woman died in Mangalore hospital, Mangalore accident news, Woman died in accident, Woman died in marriage anniversary, ಬೈಕ್​ ಅಪಘಾದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು, ಮಂಗಳೂರು ಆಸ್ಪತ್ರೆಯಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು, ಮಂಗಳೂರು ಅಪಘಾತ ಸುದ್ದಿ, ಅಪಘಾತದಲ್ಲಿ ಮಹಿಳೆ ಸಾವು, ಮದುವೆ ವಾರ್ಷಿಕೋತ್ಸವ ದಿನದಂದ ಮಹಿಳೆ ಸಾವು,
ಮದುವೆ ವಾರ್ಷಿಕೋತ್ಸವ ದಿನದಂದು ಅಪಘಾತ

By

Published : Dec 17, 2021, 1:38 PM IST

Updated : Dec 17, 2021, 1:50 PM IST

ನೆಲ್ಯಾಡಿ :ಗ್ರಾಮದ ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಬಳಿ ಡಿ.15ರಂದು ಬೆಳಿಗ್ಗೆ ಬೈಕ್ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಹಿಳೆಯ ಪತಿ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೆರಾಬೆ ಗ್ರಾಮದ ಅತ್ರಿಮಜಲು ನಿವಾಸಿ ದಿನೇಶ್ ಎಂಬವರ ಪತ್ನಿ ಗೀತಾ (30) ಮೃತಪಟ್ಟವರು. ದಿನೇಶ್​, ಗೀತಾ ಹಾಗೂ ಅವರ ಇಬ್ಬರು ಮಕ್ಕಳು ಡಿ.15ರಂದು ಬೆಳಗ್ಗೆ ಬೈಕ್​ನಲ್ಲಿ ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಸೌತಡ್ಕ ದೇವಸ್ಥಾನಕ್ಕೆ ಹೋಗುತ್ತಿದ್ದರು.

ಈ ವೇಳೆ ನೆಲ್ಯಾಡಿ ಗ್ರಾಮದ ಕೊಂತ್ರಿಜಾಲು ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಬಳಿ ಬೈಕ್​ ಪಲ್ಟಿಯಾಗಿದೆ. ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ಗೀತಾ ಗಂಭೀರವಾಗಿ ಗಾಯಗೊಂಡಿದ್ದರು. ಸವಾರ ದಿನೇಶ್​ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಗೀತಾರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಸ್ತೆಯ ಗುಂಡಿಗಳೇ ಅಪಘಾತಕ್ಕೆ ಕಾರಣ

ಆಲಂಕಾರು-ನೆಲ್ಯಾಡಿ ರಸ್ತೆಯಲ್ಲಿ ಮಾದೇರಿಯಿಂದ ನೆಲ್ಯಾಡಿ ತನಕ ರಸ್ತೆ ಸಂಪೂರ್ಣ ಹೊಂಡ, ಗುಂಡಿಗಳಿಂದ ತುಂಬಿದೆ. ವಾಹನ ಸವಾರರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಈ ರಸ್ತೆ ಸರಿಪಡಿಸಲು ಸಂಬಂಧಪಟ್ಟವರು ಗಮನ ಹರಿಸದೇ ಇರುವುದೇ ಅಪಘಾತಗಳಿಗೆ ಕಾರಣ ಎನ್ನಲಾಗಿದೆ.

Last Updated : Dec 17, 2021, 1:50 PM IST

ABOUT THE AUTHOR

...view details