ಮಂಗಳೂರು: ಯುವ ಸಮೂಹದಿಂದ ಆರೋಗ್ಯ, ಪರಿಸರ ಜಾಗೃತಿ, ಫಿಟ್ನೆಸ್, ಸ್ತ್ರೀ ಸಬಲೀಕರಣ, ಕಡಲ ಕಿನಾರೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಬಿಗ್ ಬ್ಯಾಂಗ್ ಎಂಬ ವಿಭಿನ್ನ ಕಾರ್ಯಕ್ರಮವೊಂದು ನಗರದ ತಣ್ಣೀರು ಬಾವಿ ಕಡಲ ತೀರದಲ್ಲಿ ಇಂದು ನಡೆಯಿತು.
ಕಡಲ ತೀರದಲ್ಲಿ ಯುವ ಸಮೂಹದಿಂದ ಜಾಗೃತಿ ಮೊಹಮ್ಮದ್ ಫೌಝಾನ್ ಶೇಕ್ ಮತ್ತು ಜೀವನ್ ಸ್ಟಾವ್ಲಿನ್ ತೌರೋ ನೇತೃತ್ವದ ಟೀಂ, ಬಿಗ್ ಬ್ಯಾಂಗ್ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ಉದ್ಘಾಟಿಸಿದರು.
ಓದಿ: ಆತ್ಮ ನಿರ್ಭರ ನನ್ನ ಯೋಜನೆಯ ಕಾಪಿ: ಕುಮಾರಸ್ವಾಮಿ
ನಗರದ ಮಂಗಳಾ ಸ್ಟೇಡಿಯಂನಿಂದ ತಣ್ಣೀರುಬಾವಿ ಕಡಲ ತೀರಕ್ಕೆ ಸೈಕಲ್ ರೈಡಿಂಗ್ ಹಾಗೂ ಮಹಿಳಾ ಬೈಕ್ ರೈಡಿಂಗ್ ನಡೆಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಬೀಚ್ ಕ್ಲೀನಿಂಗ್ ಮಾಡಲಾಯಿತು. ಮಂಗಳೂರು ಸರ್ಫ್ ಕ್ಲಬ್ ವತಿಯಿಂದ ಸರ್ಫಿಂಗ್ ಹಾಗೂ ವಿಡಿಆರ್ಡಿ ಸರ್ಫ್ ಲೈಫ್ ತಂಡದಿಂದ ಸಮುದ್ರಕ್ಕೆ ಮುಳುಗುವವರ ರಕ್ಷಣಾ ಕಾರ್ಯಗಳ ಬಗ್ಗೆ ಪರಿಣಿತರಿಂದ ತರಬೇತಿ ನೀಡಲಾಯಿತು. ಜೊತೆಗೆ ಝೂಸ್ ಫಿಟ್ನೆಸ್ ಸೆಂಟರ್ನಿಂದ ನಡೆಸಿಕೊಟ್ಟ ಝೂಂಬಾ ನೃತ್ಯದಲ್ಲಿ ಎಲ್ಲರೂ ಭಾಗವಹಿಸಿದರು. ಎಂಎಸ್ ಸ್ಪೋರ್ಟ್ಸ್ ಸಂಸ್ಥೆ 400 ಜನರಿಗೆ ಉಚಿತವಾಗಿ ಮಾಸ್ಕ್ ಹಂಚಿಕೆ ಮಾಡಿತು.
ಅಲ್ಲದೆ ಎಸ್ಕ್ಯೂಬ್, ಕರ್ನಾಟಕ ಏಜೆನ್ಸಿ ಮಹೀಂದ್ರಾ ಸಂಸ್ಥೆಗಳು ಈ ಕಾರ್ಯಕ್ರಮದೊಂದಿಗೆ ಕೈ ಜೋಡಿಸಿದವು. ಕಾರ್ಯಕ್ರಮದಲ್ಲಿ ಮನಪಾ ಸದಸ್ಯೆ ಸುನೀತಾ, ಪಮ್ಮಿ ಕೊಡಿಯಾಲ್ ಬೈಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.