ಬೆಳ್ತಂಗಡಿ: ಬಂದಾರು ಗ್ರಾಮದ ಮೈರೋಳ್ತಡ್ಕದ ಭರತೇಶ್ ಗೌಡ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಕ್ಕೆ ಬೆಳ್ತಂಗಡಿಯ ಭರತೇಶ್ ಗೌಡ ಆಯ್ಕೆ - throwball
ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾವಳಿಯು ಅ. 29 ರಿಂದ 31ರವರೆಗೆ ಹರಿಯಾಣ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು, ಬಂದಾರು ಗ್ರಾಮದ ಮೈರೋಳ್ತಡ್ಕ ನಿವಾಸಿ ಭರತೇಶ್ ಗೌಡರವರು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಭರತೇಶ್ ಗೌಡ
ಹರಿಯಾಣ ವಿಶ್ವವಿದ್ಯಾಲಯದಲ್ಲಿ ಅ. 29 ರಿಂದ 31ರ ವರೆಗೆ ಈ ಪಂದ್ಯಾಕೂಟ ನಡೆಯಲಿದೆ. ಬಂದಾರು ಗ್ರಾಮದ ಮೈರೋಳ್ತಡ್ಕ, ನೆಲ್ಲಿದಕಂಡ ಬೊಮ್ಮಣ್ಣ ಗೌಡ ಮತ್ತು ಚೆಲುವಮ್ಮ ದಂಪತಿ ಪುತ್ರ ಭರತೇಶ್ ಗೌಡ ಪ್ರಸ್ತುತ ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಪದವಿ ಓದುತ್ತಿದ್ದಾರೆ.
ಬೆಳ್ತಂಗಡಿ ವಾಣಿ ಪಿ.ಯು.ಕಾಲೇಜಿನ ವ್ಯಾಸಂಗ ಮಾಡಿರುವ ಇವರು, ಪಿಯು ವಿದ್ಯಾಭ್ಯಾಸದ ಸಂದರ್ಭದಲ್ಲೂ ರಾಷ್ಟಮಟ್ಟದ ತ್ರೋಬಾಲ್ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದರು.