ಕರ್ನಾಟಕ

karnataka

ETV Bharat / city

ಚರಂಡಿ ಗಬ್ಬೆದ್ದು ನಾರುತ್ತಿದ್ದರೂ ಸ್ವಚ್ಛತೆಗೆ ಮುಂದಾಗದ ಬೆಳ್ತಂಗಡಿ ಪ.ಪಂ - ಮಂಗಳೂರು ಜಿಲ್ಲಾ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತಾಲೂಕಿನ ಮಿನಿ ವಿಧಾನಸೌಧ ಹಲವಾರು ಸರ್ಕಾರಿ ಯೋಜನೆಗಳ ಸೌಲಭ್ಯ ನೀಡುವುದರ ಜೊತೆ ಉಚಿತವಾಗಿ ರೋಗ ನೀಡುವ ಬೀಡಾಗಿದೆ. ಗಬ್ಬೆದ್ದು ನಾರುವ ಚರಂಡಿ ಎದುರಿಗಿದ್ದರೂ ಪಟ್ಟಣ ಪಂಚಾಯತಿ ಮಾತ್ರ ಕಂಡೂ ಕಾಣದಂತಿದೆ. ಚರಂಡಿ ಹೂಳೆತ್ತಲು ಲಕ್ಷಾಂತ ರೂ. ಖರ್ಚು ಮಾಡುವ ಪ.ಪಂ ಹಣ ಖಾಲಿಯಾಯಿತೇ ಹೊರತು ಹೂಳು ಮಾತ್ರ ಹಾಗೆಯೇ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

belthangady-drainage-problem
ಬೆಳ್ತಂಗಡಿ ಪ.ಪಂ

By

Published : May 26, 2020, 1:49 PM IST

ಬೆಳ್ತಂಗಡಿ: ತಾಲೂಕಿನ ಮಿನಿ ವಿಧಾನಸೌಧದ ಮುಂದಿರುವ ಚರಂಡಿ ಹಲವಾರು ರೋಗಗಳ ಗೂಡಾಗಿದ್ದು, ಪಟ್ಟಣ ಪಂಚಾಯತ್​ ಮಾತ್ರ ಕಂಡೂ ಕಾಣದಂತೆ ಸುಮ್ಮನಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

ಕಚೇರಿ ಕೆಲಸಕ್ಕಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸುವ ಜನ ಡೆಂಗ್ಯೂನಂತಹ ಮಾರಕ ರೋಗಗಳು ಹರಡುವ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೆ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳಿಗೆ ಮೀಸಲಿರುವ ನಿರೀಕ್ಷಣಾ ಮಂದಿರ ಮತ್ತು ಮುಖ್ಯ ರಸ್ತೆಗೆ ಹೋಗಲು ಇದೇ ಮಾರ್ಗವನ್ನು ಬಳಸಬೇಕಾಗಿದ್ದು, ರಸ್ತೆ ಬದಿ ಇರುವ ಚರಂಡಿ ನೋಡಿದರೆ ಹೆದರಿ ಓಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಚರಂಡಿ ಗಬ್ಬೆದ್ದು ನಾರುತ್ತಿದ್ದರೂ ಸ್ವಚ್ಚತೆಗೆ ಮುಂದಾಗದ ಬೆಳ್ತಂಗಡಿ ಪ.ಪಂ

ಪಟ್ಟಣ ಪಂಚಾಯತ್ ಪ್ರತೀ ವರ್ಷ ಚರಂಡಿಗಳ ದುರಸ್ತಿಗಾಗಿ ಅದೇಷ್ಟೋ ಹಣ ಮೀಸಲಿಟ್ಟರೂ ಸಮಸ್ಯೆ ಮಾತ್ರ ಹಾಗೆಯೇ ಇದೆ. ಹೂಳು ತೆಗೆಯುವ ಕೆಲಸ ಮಾಡುತ್ತಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ. ಕಳೆದ ವರ್ಷ ನಗರ ಪಂಚಾಯತ್ ವ್ಯಾಪ್ತಿಯ 11 ವಾರ್ಡ್​ಗಳ ಚರಂಡಿಗಳ ಹೊಳೆತ್ತುವ ಕಾಮಗಾರಿಗಾಗಿ ಲಕ್ಷಾಂತರ ರೂ. ಮೀಸಲಿಡಲಾಗಿತ್ತು. ಹಣ ಖಾಲಿಯಾದರೂ ಹೂಳು ಮಾತ್ರ ಹಾಗಯೇ ಇದ್ದು, ಹಣ ದುರುಪಯೋಗದ ಆರೋಪ ಕೇಳಿ ಬರುತ್ತಿದೆ.

ನಗರ ಸೌಂದರ್ಯಕ್ಕೆ ಹಾಗೂ ವಾಹನ ನಿಲುಗಡೆಗೆ ತೊಂದರೆ ಆಗುತ್ತೆ ಎಂದು ರಸ್ತೆ ಬದಿಯಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸುವ ಅಧಿಕಾರಿಗಳಿಗೆ ಈ ಕೊಳಚೆ ಗುಂಡಿ ಮಾತ್ರ ಕಾಣದಿರುವುದು ದುರಂತ ಎನ್ನುತ್ತಾರೆ ಸಾರ್ವಜನಿಕರು.

ABOUT THE AUTHOR

...view details