ಬಂಟ್ವಾಳ(ದ.ಕ.): ಕೊರೊನಾ ಹಿನ್ನೆಲೆಯಲ್ಲಿ ಗಡಿಗಳನ್ನು ಬಂದ್ ಮಾಡಿದ್ದರೂ ಕರ್ನಾಟಕಕ್ಕೆ ಕೇರಳದ ಜನ ನುಸುಳುತ್ತಿದ್ದಾರೆ ಎಂದು ಬಂಟ್ವಾಳ ತಾಲೂಕಿನ ಕರೋಪಾಡಿ ಸ್ಥಳೀಯರು ದೂರು ನೀಡಿದ ಹಿನ್ನೆಲೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಸ್ಥಳಕ್ಕೆ ಧಾವಿಸಿ ಮತ್ತೆ ಗಡಿ ಬಂದ್ ಮಾಡಿಸಿದರು.
ಕೇರಳ ಸಂಪರ್ಕಿಸುವ ಬಂಟ್ವಾಳ ತಾಲೂಕಿನ ಗಡಿ ಮತ್ತೆ ಬಂದ್ - Bantwal Tahsildar Rashmi S.R
ಕೇರಳ ಸಂಪರ್ಕಿಸುವ ಬಂಟ್ವಾಳ ತಾಲೂಕಿನ ಗಡಿ ಭಾಗವನ್ನು ಮುಚ್ಚಿದ್ದರೂ ಜನರು ನುಸುಳುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆ ಕೂಡಲೇ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ತಹಶೀಲ್ದಾರ್ ಮತ್ತೆ ಗಡಿ ಮುಚ್ಚಿಸಿದ್ದಾರೆ.

ಲಾಕ್ಡೌನ್ ಆದೇಶವಾಗುತ್ತಿದ್ದಂತೆ ಕರೋಪಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಪ್ಪ, ವಿಟ್ಲ ಎಸ್ಐ ವಿನೋದ್ ಎಸ್.ಕೆ. ನೇತೃತ್ವದಲ್ಲಿ ಗಡಿಯನ್ನು ಬಂದ್ ಮಾಡಿದ್ದರು. ಬಂದ್ ಮಾಡಿದ್ದರೂ ಕರೋಪಾಡಿ ಕೋಡ್ಲ ರಸ್ತೆಯ ಮೂಲಕ ಕೇರಳದಿಂದ ಜನರು ವಾಹನದಲ್ಲಿ ಬರುತ್ತಿದ್ದಾರೆ ಎಂದು ಸ್ಥಳೀಯರಾದ ವಿನೋದ್ ಶೆಟ್ಟಿ ಪಟ್ಲ ಕರೋಪಾಡಿ ತಹಶೀಲ್ದಾರ್ಗೆ ದೂರು ನೀಡಿದ್ದರು.
ದೂರಿನ ಅನ್ವಯ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರರು ಮತ್ತೆ ಗಡಿ ಬಂದ್ ಮಾಡಿಸಿದರು. ಕೆಲವರು ರಸ್ತೆಯನ್ನು ಬಂದ್ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರೌಡಿ ನಿಗ್ರಹ ದಳ ಹಾಗೂ ವಿಟ್ಲ ಪೊಲೀಸರು ಬಂದು ಬಂದ್ ಮಾಡುವಲ್ಲಿ ಯಶಸ್ವಿಯಾದರು.