ಮಂಗಳೂರು:ಕರಾವಳಿಯ ಪ್ರಮುಖ ವಾಣಿಜ್ಯ ವಹಿವಾಟಿನ ಮತ್ಸೋದ್ಯಮಕ್ಕೆ ಇಂದಿನಿಂದ ರಜೆ ದೊರೆತಿದೆ. ಮೀನುಗಾರರು ಬೋಟ್ಗಳ ಮೂಲಕ ನಡೆಸುತ್ತಿದ್ದ ಆಳಸಮುದ್ರ ಮೀನುಗಾರಿಕೆಗೆ ಇಂದಿನಿಂದ 61 ದಿನಗಳ ಕಾಲ ಪ್ರತಿ ವರ್ಷದಂತೆ ನಿಷೇಧ ಹೇರಲಾಗಿದೆ.
ನಿಷೇಧಕ್ಕೆ ಕಾರಣ:
ಮಂಗಳೂರು:ಕರಾವಳಿಯ ಪ್ರಮುಖ ವಾಣಿಜ್ಯ ವಹಿವಾಟಿನ ಮತ್ಸೋದ್ಯಮಕ್ಕೆ ಇಂದಿನಿಂದ ರಜೆ ದೊರೆತಿದೆ. ಮೀನುಗಾರರು ಬೋಟ್ಗಳ ಮೂಲಕ ನಡೆಸುತ್ತಿದ್ದ ಆಳಸಮುದ್ರ ಮೀನುಗಾರಿಕೆಗೆ ಇಂದಿನಿಂದ 61 ದಿನಗಳ ಕಾಲ ಪ್ರತಿ ವರ್ಷದಂತೆ ನಿಷೇಧ ಹೇರಲಾಗಿದೆ.
ನಿಷೇಧಕ್ಕೆ ಕಾರಣ:
ಜೂನ್ 1 ರಿಂದ ಮಳೆಗಾಲದ ಅವಧಿ. ಈ ಅವಧಿಯಲ್ಲಿ ಸಮುದ್ರದ ಮೀನುಗಳು ತನ್ನ ಜೀವದಲ್ಲಿ ತತ್ತಿಗಳನ್ನು ಇಟ್ಟುಕೊಂಡು ಸಂತಾನೋತ್ಪತ್ತಿ ವೃದ್ದಿಸುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮುಂದೆ ಮತ್ಸ್ಯ ಕ್ಷಾಮ ಉಂಟಾಗಲಿದೆ ಎಂಬ ನೆಲೆಯಲ್ಲಿ ಹಾಗೂ ಇದೇ ವೇಳೆ, ಸಮುದ್ರ ಪ್ರಕ್ಷುಬ್ದವಾಗಿ ಮೀನುಗಾರಿಕೆ ನಡೆಸುವ ಬೋಟ್ ಮತ್ತುಮೀನುಗಾರರ ಪ್ರಾಣಕ್ಕೆ ಅಪಾಯ ಇರುವುದರಿಂದ ಸರಕಾರವೇ ಈ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆಯನ್ನು ನಿಷೇಧಿಸಿದೆ.
ಈ ನಿಷೇಧ ಜುಲೈ 31 ರ ವರೆಗೆ ಇರಲಿದ್ದು ಒಟ್ಟು 61 ದಿನಗಳ ಕಾಲ ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿರುತ್ತದೆ. ಆದರೆ ಈ ಅವಧಿಯಲ್ಲಿ ಸಮುದ್ರತೀರದಲ್ಲಿ ಮೀನುಗಾರಿಕೆಗೆ ಅವಕಾಶವಿದೆ. 10 ಅಶ್ವಶಕ್ತಿಯೊಳಗಿನ ಮೀನುಗಾರಿಕಾ ದೋಣಿಗಳು, ನಾಡದೋಣಿಗಳಿಗೆ ಮೀನುಗಾರಿಕೆ ನಡೆಸಲು ಅವಕಾಶವಿದೆ. ಆದರೆ ಇವುಗಳಿಂದ ಆಳಸಮುದ್ರ ಮೀನುಗಾರಿಕೆ ನಡೆಸುವ ಬೋಟ್ಟ್ಗಳಲ್ಲಿ ಸಿಗುತ್ತಿದ್ದ ಮೀನುಗಳು ಸಿಗದೇ ಇರುವುದರಿಂದ ಈ ಮೀನುಗಳು ಮಾರುಕಟ್ಟೆ ಬೇಡಿಕೆಗೆ ಸಾಲುವುದಿಲ್ಲ.
ಮೀನುಗಾರಿಕಾ ನಿಷೇಧ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸಿದರೆ ಮೀನುಗಾರಿಕಾ ಇಲಾಖೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದು, ಹೆಚ್ಚಿನ ಮೀನುಗಾರರು ಈ ಆದೇಶ ಪಾಲಿಸುತ್ತಾರೆ. ಇಂದಿನಿಂದ ಮೀನುಗಾರಿಕೆ ನಿಷೇಧವಾಗಿರುವುದರಿಂದ ಬೋಟ್ಗಳು ಬಂದರಿನಲ್ಲಿ ಲಂಗರು ಹಾಕಿವೆ.