ಕರ್ನಾಟಕ

karnataka

ETV Bharat / city

ಕೆಂಪು ಕಲ್ಲುಕೋರೆ ಅಡ್ಡೆ ಮೇಲೆ ದಾಳಿ : 31 ಲಕ್ಷ ರೂ. ಮೌಲ್ಯದ ಸೊತ್ತು ವಶ - undefined

ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಹಿನ್ನಲೆ ಪಣಂಬೂರು ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ್​ ಆರ್ ಗೌಡರ ನೇತೃತ್ವದ ರೌಡಿ ನಿಗ್ರಹ ದಳವು ದಾಳಿ ನಡೆಸಿ 31 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಪು ಕಲ್ಲುಕೋರೆ ಅಡ್ಡೆ ಮೇಲೆ ದಾಳಿ

By

Published : Jul 5, 2019, 7:38 PM IST

ಮಂಗಳೂರು: ನಗರದ ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳವು ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಮಿಜಾರು ಗ್ರಾಮದ ಪದಮಲೆ ಮತ್ತು ಮಂಜನಬೈಲು ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಡ್ಡೆ ಮೇಲೆ ದಾಳಿ ಮಾಡಿ ಸುಮಾರು 31 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜೋಕಿಂ ಕೊರೆಯ ಮತ್ತು ಹೇಮಚಂದ್ರ, ಜಗದೀಶ್ ಎಂಬುವವರು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆ, ಪಣಂಬೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ್​ ಆರ್ ಗೌಡರ ನೇತೃತ್ವದ ರೌಡಿ ನಿಗ್ರಹ ದಳವು ದಾಳಿ ನಡೆಸಿತು. ಈ‌ ಸಂದರ್ಭ ಕೆಂಪು ಕಲ್ಲುಗಳನ್ನು ಕೊರೆಯುವ 4 ಟಿಲ್ಲರ್, ಡ್ರೆಜ್ಜಿಂಗ್ ಮಷಿನ್​ಗಳನ್ನು ಹಾಗೂ ಮೂಡುಬಿದಿರೆ ತಾಲೂಕು ಬಡಗಮಿಜಾರು ಗ್ರಾಮದ ಬಂಗೇರಪದವು ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ 4 ಲಾರಿಗಳನ್ನು ಕೆಂಪು ಕಲ್ಲುಗಳ ಸಹಿತ ವಶಪಡಿಸಿಕೊಳ್ಳಲಾಗಿದೆ.

ಇನ್ನು ವಶಪಡಿಸಿಕೊಂಡ 4 ಟಿಲ್ಲರ್, ಡ್ರೆಜ್ಜಿಂಗ್ ಮೆಷಿನ್ ಮತ್ತು 4 ಲಾರಿಗಳ ಒಟ್ಟು ಮೌಲ್ಯ 3.60 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. 4 ಲಾರಿಗಳಲ್ಲಿ ತುಂಬಿಸಿದ ಕೆಂಪು ಕಲ್ಲಿನ ಒಟ್ಟು ಮೌಲ್ಯ 60,000 ರೂ. ಎಂದು ಅಂದಾಜಿಸಲಾಗಿದೆ. ವಶಕ್ಕೆ ಪಡೆದ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ.

ಈ ದಾಳಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್​ರವರ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತರಾದ ಹನಮಂತರಾಯ ಮತ್ತು ಲಕ್ಷ್ಮೀ ಗಣೇಶ್​ರವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಪಣಂಬೂರಿನ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಆರ್. ಗೌಡ ಆದೇಶದಂತೆ ನಡೆಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣಾ ಉಪ ನಿರೀಕ್ಷಕ ದೇಜಪ್ಪ ಮತ್ತು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿ ಎಎಸ್ಐ ಮೊಹಮ್ಮದ್, ಕುಶಲ ಮಣಿಯಾಣಿ, ವಿಜಯ್ ಕಾಂಚನ್, ಸತೀಶ್ ಎಂ. ಇಸಾಕ್ ಹಾಗೂ ಶರಣ್ ಕಾಳಿ ಹಾಗೂ ಮೂಡುಬಿದಿರೆ ಪೊಲೀಸ್ ಠಾಣಾ ಸಿಬ್ಬಂದಿಯಾದ ಶಿವರಾಜ್, ಬಂದೇ ನವಾಜ್, ಹಾಗೂ ಮೂಡುಬಿದಿರೆ ಠಾಣಾ ಪೊಲೀಸರು ಭಾಗಿಯಾಗಿದ್ದರು.

For All Latest Updates

TAGGED:

ABOUT THE AUTHOR

...view details