ಕರ್ನಾಟಕ

karnataka

ETV Bharat / city

ಬಂಟ್ವಾಳದಲ್ಲಿ ಅಕ್ರಮ ದನ ಸಾಗಣೆ: ಎಸ್​ಐ ಮೇಲೆ ವಾಹನ ಹರಿಸಲು ಯತ್ನ! - ಪೊಲೀಸರ ಮೇಲೆ ದಾಳಿ

ಅಕ್ರಮ ದನ ಸಾಗಣೆ ತಡೆಯಲು ಹೋದ ಎಸ್​ಐ ಮೇಲೆ ದಾಳಿ ನಡೆಸಲು ಮುಂದಾದ ಘಟನೆ ನಡೆದಿದೆ.

ಅಕ್ರಮ ದನ ಸಾಗಣೆ
ಅಕ್ರಮ ದನ ಸಾಗಣೆ

By

Published : May 15, 2022, 9:32 AM IST

ಬಂಟ್ವಾಳ: ಅಕ್ರಮ ದನ ಸಾಗಣೆ ತಡೆಯಲು ಹೋದ ಎಸ್​ಐ ಮೇಲೆ ದುಷ್ಕರ್ಮಿಗಳು ವಾಹನ ನುಗ್ಗಿಸಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಅದೃಷ್ಟವಶಾತ್ ಅಪಾಯದಿಂದ ಎಸ್​ಐ ಪಾರಾಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಪುಂಜಾಲಕಟ್ಟೆ ಎಸ್​ಐ ಸುತೇಶ್ ಎಂಬವರ ಮೇಲೆ ದನ ಸಾಗಾಟ ಮಾಡುತ್ತಿದ್ದ ಆರೋಪಿಗಳು ವಾಹನ ನುಗ್ಗಿಸಲು ಪ್ರಯತ್ನಿಸಿದ್ದಾರೆ. ರಾತ್ರಿ ವೇಳೆ ರೌಂಡ್ಸ್​ನಲ್ಲಿದ್ದ ಸುತೇಶ್ ಅವರು ಕುದ್ಕೊಳಿ ಎಂಬಲ್ಲಿ ಸಂಶಯಾಸ್ಪದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ್ದರು. ಆಗ ಚಾಲಕ ವಾಹನ ನಿಲ್ಲಿಸದೆ ಎಸ್​ಐ ಮೇಲೆ ನುಗ್ಗಿಸಿದ್ದಾನೆ. ಆ ಬಳಿಕ ವಾಹನ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ವಾಹನದಲ್ಲಿ ಇಬ್ಬರು ಆರೋಪಿಗಳು ಮೂರು ಗೋವುಗಳನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾತ್ರಿ ವೇಳೆ ಹಟ್ಟಿಯಿಂದ ಕಳ್ಳತನ ಮಾಡಿ ತಂದಿರುವ ಗೋವುಗಳಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಅತ್ತೆ ಮನೆಗೆ ಹೋಗಿ ಬರುತ್ತಿದ್ದ ವೇಳೆ ಎಸ್​ಐ ಮೇಲೆ ಯುವಕರಿಂದ ದಾಳಿ! ವಿಡಿಯೋ

ABOUT THE AUTHOR

...view details