ಕರ್ನಾಟಕ

karnataka

ETV Bharat / city

ಮಂಗಳೂರು ಸಬ್​​ ಜೈಲ್​ ಮೇಲೆ​ ದಾಳಿ: ಮೊಬೈಲ್​​, ಸಿಮ್​ ಕಾರ್ಡ್​, ಡ್ರಗ್ಸ್​​ ಸೇವಿಸುವ ಸಾಧನ ಪತ್ತೆ - undefined

ಮಂಗಳೂರು ಸಬ್​ ಜೈಲ್ ಮೇಲೆ ದಿಢೀರ್​ ದಾಳಿ. ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ದಾಳಿ. ವಿಚಾರಣಾಧೀನ ಕೈದಿಗಳ ಬಳಿ ಎರಡು ಮೊಬೈಲ್, ಮೂರು ಸಿಮ್ ಕಾರ್ಡ್, ಎರಡು ಮೆಮೊರಿ ಕಾರ್ಡ್ ಹಾಗೂ ಡ್ರಗ್ಸ್ ಸೇವಿಸುವ ಸಾಧನ ಪತ್ತೆ.

ಮಂಗಳೂರು ಸಬ್​ ಜೈಲ್

By

Published : Apr 17, 2019, 8:10 AM IST

ಮಂಗಳೂರು: ನಗರದ ಸಬ್‌ ಜೈಲ್‌ ಮೇಲೆ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಿದ್ದು, ವಿಚಾರಣಾಧೀನ ಕೈದಿಗಳ ಬಳಿಯಲ್ಲಿದ್ದ ಎರಡು ಮೊಬೈಲ್, ಮೂರು ಸಿಮ್ ಕಾರ್ಡ್, ಎರಡು ಮೆಮೊರಿ ಕಾರ್ಡ್ ಹಾಗೂ ಡ್ರಗ್ಸ್ ಸೇವಿಸುವ ಸಾಧನ ಪತ್ತೆಯಾಗಿವೆ.

ಈ ಹಿಂದೆಯೇ ಫೆ. 24 ರಂದು ಆಯುಕ್ತರ ನೇತೃತ್ವದಲ್ಲಿ ಜೈಲ್‌ ಮೇಲೆ ದಿಢೀರ್ ದಾಳಿ ನಡೆಸಲಾಗಿತ್ತು. ಆ ಸಂದರ್ಭ ಆರು ಮೊಬೈಲ್, ಮೂರು ಚೂರಿ ಮೊದಲಾದ ಸಾಧನಗಳು ಪತ್ತೆಯಾಗಿದ್ದವು.

ತನಿಖೆ ನಡೆಸಿ ಕ್ರಮ:

ಚುನಾವಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ಈ ತಪಾಸಣೆ ನಡೆಸಲಾಗಿದ್ದು, ವಿಚಾರಣಾಧೀನ ಕೈದಿಗಳ ಬಳಿ ಪತ್ತೆಯಾದ ಮೊಬೈಲ್ ಸಂಖ್ಯೆಗಳಿಂದ ಹೋಗಿರುವ ಕರೆಗಳ‌ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೊಬೈಲ್ ಹಾಗೂ ಸಿಮ್ ಜೈಲ್‌ನೊಳಗೆ ಹೇಗೆ ಬಂತು ಎನ್ನುವುದರ ಬಗ್ಗೆಯೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮಂಗಳೂರು ಸಬ್​ ಜೈಲ್

ಸಬ್ ಜೈಲ್‌ನಲ್ಲಿ ಕೈಗಾರಿಕಾ ಭದ್ರತಾ ಪಡೆ ಹಾಗೂ ಜೈಲು ಸಿಬ್ಬಂದಿ ತಪಾಸಣೆ ನಡೆಸಿ ನಿಗಾ ಇಟ್ಟರೂ ಕೈದಿಗಳ ಬಳಿಗೆ ಮೊಬೈಲ್ ಹೇಗೆ ಸೇರುತ್ತದೆ ಎನ್ನುವುದು ಗಂಭೀರ ವಿಚಾರವಾಗಿದೆ. ಜೈಲು ಸಿಬ್ಬಂದಿ ಸಹಕಾರ ಇಲ್ಲದಿದ್ದರೆ ನಿಷೇಧಿತ ವಸ್ತುಗಳು ಒಳಗಡೆ ಹೋಗಲು ಸಾಧ್ಯವಿಲ್ಲ ಎನ್ನುತ್ತಾರೆ ಪೊಲೀಸರು.

For All Latest Updates

TAGGED:

ABOUT THE AUTHOR

...view details