ಕರ್ನಾಟಕ

karnataka

ETV Bharat / city

ಬೆಳ್ತಂಗಡಿ : ವಾರೆಂಟ್​ ಪ್ರತಿ ಹಿಡಿದು ಮನೆಗೆ ಹೋದ ಪೊಲೀಸರ ಮೇಲೆ ಹಲ್ಲೆ! - ಪೊಲೀಸರ ಮೇಲೆ ಹಲ್ಲೆ

ಶಂಕರನಾರಾಯಣ ಪೊಲೀಸ್ ಠಾಣೆ ಸಿಬ್ಬಂದಿ ಅಬ್ದುಲ್ ಲತೀಫ್ ಮನೆಗೆ ಹೋಗಿ ವಾರೆಂಟ್ ಪ್ರತಿ ತೋರಿಸಿ ತಮ್ಮೊಂದಿಗೆ ಬರುವಂತೆ ಸೂಚಿಸಿದ್ದರು. ಆದರೆ, ಪೊಲೀಸರ ಮೇಲೆಯೇ ಗುಂಪೊಂದು ಹಲ್ಲೆ ನಡೆಸಿದೆ..

assault on police in belthangady
ಪೊಲೀಸರ ಮೇಲೆ ಹಲ್ಲೆ

By

Published : Apr 9, 2022, 6:50 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ) :ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಾರೆಂಟ್ ಪ್ರತಿ ಹಿಡಿದು ಮನೆಗೆ ಹೋದ ಪೊಲೀಸ್ ಸಿಬ್ಬಂದಿ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಳದಂಗಡಿಯ ಪಿಲ್ಯ ಸಮೀಪ ನಡೆದಿದೆ. ಪಿಲ್ಯ ಸಮೀಪದ ಗೋಳಿಕಟ್ಟೆ ಎಂಬಲ್ಲಿಯ ಅಬ್ದುಲ್ ಲತೀಫ್ ಎಂಬಾತನಿಗೆ ಕುಂದಾಪುರ ನ್ಯಾಯಾಲಯ ವಾರೆಂಟ್ ನೀಡಿತ್ತು.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯ ಸಿಬ್ಬಂದಿ ಲೋಹಿತ್ ಹಾಗೂ ನಾರಾಯಣ ಗೌಡ ಅವರು ಅಬ್ದುಲ್ ಲತೀಫ್ ಮನೆಗೆ ಹೋಗಿ ವಾರೆಂಟ್ ಪ್ರತಿ ತೋರಿಸಿ ನಮ್ಮೊಂದಿಗೆ ಬರುವಂತೆ ಸೂಚಿಸಿದಾಗ ವಾರೆಂಟ್ ಪ್ರತಿಯನ್ನು ಪೊಲೀಸರ ಕೈಯಿಂದ ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿ:ಮಠಗಳಿಗೆ ಅನುದಾನ ವಿಚಾರ : ಸಿಎಂ ಮೇಲೆ ಸಾರಂಗಧರ ಶ್ರೀಗಳ ಅಸಮಾಧಾನ

ಅಲ್ಲದೇ ಇತರರನ್ನು ಕರೆದು ಹಲ್ಲೆ ಮಾಡಿ ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವೇಣೂರು ಠಾಣೆಗೆ ನಾರಾಯಣ ಗೌಡ ದೂರು ನೀಡಿದ್ದು, ಅಬ್ದುಲ್ ಲತೀಫ್ ಸೇರಿದಂತೆ ಹಲವರ ಮೇಲೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details