ಮಂಗಳೂರು: ನಗರದ ಹೊರವಲಯದ ಬೈಕಂಪಾಡಿಯ ಕಾವೇರಿ ಫೋರ್ಡ್ ಕಂಪೆನಿಯ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯನ್ನು ದರೋಡೆ ಮಾಡಿದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಕಸಬ ಬೆಂಗ್ರೆ ತೌಹೀದ್ ಮಂಜಿಲ್ ನಿವಾಸಿ ಸರ್ಫರಾಜ್ (28) ಹಾಗೂ ಕಸಬ ಬೆಂಗ್ರೆಯ ಸೈಯದ್ ಅಫ್ರಿದ್ ಯಾನೆ ಕುಡಿಯ ಅಪ್ಪಿ (21) ಬಂಧಿತರು. ಆಗಸ್ಟ್ 6 ರಂದು ಆರೋಪಿಗಳು ಬೈಕಂಪಾಡಿಯ ಕಾವೇರಿ ಫೋರ್ಡ್ ಕಂಪೆನಿಯ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರ ಮೊಬೈಲ್ ಹಾಗೂ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.