ಮಂಗಳೂರು:ಅಡಕೆಯಲ್ಲಿ ಕ್ಯಾನ್ಸರ್ ರೋಗವನ್ನು ಶಮನಗೊಳಿಸುವ ಗುಣಗಳಿವೆ ಎಂಬ ವೈಜ್ಞಾನಿಕ ಆಧಾರಗಳನ್ನು ರೂಪಿಸುವ ನಿಟ್ಟಿನಲ್ಲಿ ಕ್ಯಾಂಪ್ಕೊ ಕಂಪನಿ ಹೆಜ್ಜೆ ಇರಿಸಿದೆ. ಈ ಮೂಲಕ ಅಡಕೆ ಕ್ಯಾನ್ಸರ್ಕಾರಕ ಎಂಬ ಹಣೆಪಟ್ಟಿಯನ್ನು ವೈಜ್ಞಾನಿಕವಾಗಿ ಕಳಚಿಹಾಕಲು ಸಿದ್ಧತೆ ನಡೆಯುತ್ತಿದೆ.
ಇದಕ್ಕಾಗಿ ನಿಟ್ಟೆ ವಿಶ್ವ ವಿದ್ಯಾಲಯದ ವಿಜ್ಞಾನಿಗಳೊಂದಿಗೆ ಸಂಶೋಧನೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕ್ಯಾಂಪ್ಕೊ 25 ಲಕ್ಷ ರೂ. ವೆಚ್ಚ ಮಾಡುತ್ತಿದೆ. ನಿಟ್ಟೆ ವಿವಿಯ ತಜ್ಞ ಡಾ.ಇಡ್ಯಾ ಕರುಣಾ ಸಾಗರ್ ಲ್ಯಾಬೊರೇಟರಿ ಇವಾಲ್ಯುವೇಶನ್ ನಡೆಸಲಿದ್ದಾರೆ. ಈ ಪ್ರಯೋಗವನ್ನು ಮೊಟ್ಟ ಮೊದಲು ಝೀಬ್ರಾ ಮೀನುಗಳ ಮೇಲೆ ಪ್ರಯೋಗ ನಡೆಸಲಾಗುತ್ತದೆ.
ಅಡಕೆಯಲ್ಲಿ ಕ್ಯಾನ್ಸರ್ ಗುಣಕಾರಕ ಅಂಶವಿದೆ ಎನ್ನುವುದಕ್ಕೆ ಸಂಶೋಧನೆ ಜೊತೆಯಲ್ಲಿಯೇ ಈ ಕುರಿತ ಔಷಧವೊಂದನ್ನೂ ಜೆಡ್ಡು ಆಯುರ್ವೆದ ಅಧ್ಯಯನ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಇದಕ್ಕೆ ಕ್ಯಾಂಪ್ಕೊ ಪ್ರವರ್ತಿತ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್ಡಿಎಫ್) ನೆರವು ನೀಡುತ್ತಿದೆ. ಇದರಲ್ಲಿ ಶೇ.20 ಅಡಕೆ ಹಾಗೂ ಶೇ.20 ವೀಳ್ಯದೆಲೆಯ ಅಂಶಗಳಿದ್ದರೆ ಉಳಿದಂತೆ ಜೇನು, ಲವಂಗ, ಅರಿಶಿಣ ಇತ್ಯಾದಿಗಳಿರುತ್ತವೆ.