ಕರ್ನಾಟಕ

karnataka

ETV Bharat / city

ಕುಕ್ಕೆಯ ಪ್ರಾಕೃತಿಕ ಸೊಬಗಿನ ರಸ್ತೆಯ ಚಿತ್ರವನ್ನು ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ!

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಯ ಪ್ರಾಕೃತಿಕ ಸೊಬಗಿನ ರಸ್ತೆಯ ಚಿತ್ರವನ್ನು ಮಹೀಂದ್ರ ಗ್ರೂಪ್‌ನ ಚೇರ್‌ಮೆನ್ ಆನಂದ್ ಮಹೀಂದ್ರಾ ಟ್ವೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ..

Anand Mahindra tweeted over Kukke Subramanya road, Anand Mahindra tweeted over Kukke Subramanya forest nature, Anand Mahindra tweeted news, ಕುಕ್ಕೆ ಸುಬ್ರಹ್ಮಣ್ಯ ರಸ್ತೆ ಬಗ್ಗೆ ಆನಂದ್ ಮಹೀಂದ್ರಾ ಟ್ವೀಟ್, ಕುಕ್ಕೆ ಸುಬ್ರಹ್ಮಣ್ಯ ಅರಣ್ಯ ಕುರಿತು ಆನಂದ್ ಮಹೀಂದ್ರ ಟ್ವೀಟ್, ಆನಂದ್ ಮಹೀಂದ್ರ ಟ್ವೀಟ್ ಸುದ್ದಿ,
ಕುಕ್ಕೆಯ ಪ್ರಾಕೃತಿಕ ಸೊಬಗಿನ ರಸ್ತೆಯ ಚಿತ್ರ ಟ್ವಿಟ್ ಮಾಡಿದ ಆನಂದ್ ಮಹೀಂದ್ರಾ

By

Published : Jun 3, 2022, 11:36 AM IST

ಸುಬ್ರಹ್ಮಣ್ಯ :ವಿಶ್ವ ಪ್ರಸಿದ್ಧ ಮಹೀಂದ್ರ ಗ್ರೂಪ್‌ನ ಚೇರ್‌ಮೇನ್ ಆಗಿರುವ ಆನಂದ್ ಮಹೀಂದ್ರ ಅವರು ಕುಕ್ಕೆ ಸುಬ್ರಹ್ಮಣ್ಯ-ಗುಂಡ್ಯ ನಡುವೆ ಇರುವ ಅರಣ್ಯ ಪ್ರದೇಶದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಇದೀಗ ವೈರಲ್ ಆಗ್ತಿದೆ.

ವಿಸಿಟ್ ಉಡುಪಿ ಎಂಬ ಟ್ವಿಟರ್ ಖಾತೆಯವರು ಕೆಲವು ದಿನಗಳ ಹಿಂದೆ ಈ ಪ್ರಾಕೃತಿಕ ಸುಂದರ ಚಿತ್ರವನ್ನು ಟ್ವೀಟ್ ಮಾಡಿದ್ದರು. ಗುಂಡ್ಯದಿಂದ ಸುಬ್ರಹ್ಮಣ್ಯಕ್ಕೆ ಅರಣ್ಯ ಪ್ರದೇಶ ಮಧ್ಯೆದಲ್ಲಿ ಸಾಗುವಾಗ ಸಿಗುವ ಹೆದ್ದಾರಿಯ ಚಿತ್ರವನ್ನು ‘ಜಗತ್ತಿನ ಅತ್ಯಂತ ಸುಂದರ ಕಾಡಿನ ಪ್ರಯಾಣ’ ಎಂಬ ಶೀರ್ಷಿಕೆಯಡಿ ವಿಸಿಟ್​ ಉಡುಪಿ ಟ್ವೀಟ್​ ಮಾಡಿತ್ತು.

ಓದಿ:'ಭಾರತಿ ಡ್ರೈವಿಂಗ್​ ಸ್ವರಾಜ್'.. ಮದುವೆ ಮಂಟಪಕ್ಕೆ ಟ್ರ್ಯಾಕ್ಟರ್​ನಲ್ಲಿ ಬಂದ ಯುವತಿ ನಡೆಗೆ ಆನಂದ್ ಮಹೀಂದ್ರಾ ಫಿದಾ!

ಆನಂದ್ ಮಹೀಂದ್ರಾ ಅವರು ಈ ಫೋಟೋವನ್ನು ರೀ ಟ್ವೀಟ್​ ಮಾಡಿದ್ದಾರೆ. ‘ಸುಂದರ.. ಈ ಸೌಂದರ್ಯ ಸೊಬಗಿನ ಚಿತ್ರದೊಳಗೆ ನಾನು ಧುಮುಕಲು ಬಯಸುವಂತೆ ಮಾಡುತ್ತದೆ’ ಎಂದು ಆನಂದ್​ ಮಹೀಂದ್ರಾ ವರ್ಣಿಸಿದ್ದಾರೆ.

ಇದೀಗ ಈ ಪ್ರಾಕೃತಿಕ ಸೊಬಗು ಹೊಂದಿರುವ ಚಿತ್ರವನ್ನು ಅನೇಕ ಮಂದಿ ಹಲವು ರೀತಿಯಲ್ಲಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಟ್ವೀಟ್ ಭಾರೀ ವೈರಲ್ ಆಗಿದ್ದು, ಕುಕ್ಕೆಯ ಸುಂದರ ಅರಣ್ಯ ಪ್ರದೇಶವನ್ನು ಜನತೆ ಕೊಂಡಾಡುತ್ತಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವ ಬಯಕೆ ನಮಗಿದೆ ಎಂಬ ರೀತಿ ಹಲವರು ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details