ಮಂಗಳೂರು: ತೌಕ್ತೆ ಚಂಡಮಾರುತ ಪರಿಣಾಮ ಸಮುದ್ರ ಮಧ್ಯೆ ದುರ್ಘಟನೆಗೊಳಗಾದ ಟಗ್ ಅಲೈನ್ಸ್ ಎಂಬ ನೌಕೆಯನ್ನು ಮೇಲೆತ್ತುವ ಕಾರ್ಯಕ್ಕೆ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದು ಎಂಆರ್ಪಿಎಲ್ ಸಂಸ್ಥೆ ತಿಳಿಸಿದೆ.
ಎಂಆರ್ಪಿಎಲ್, ಎನ್ಎಂಪಿಟಿ, ಟಗ್ ಅಲೈನ್ಸ್ ನೌಕೆಯ ಮಾಲೀಕ, ಗುತ್ತಿಗೆದಾರ ಎಲ್ಲರ ಪ್ರಯತ್ನದಿಂದ ನೌಕೆಯನ್ನು ಮೇಲೆತ್ತುವ ಕಾರ್ಯ ಮಾಡಲಾಗುತ್ತಿದೆ. ಕಾರ್ಯಾಚರಣೆ ನಡೆಯುವ ಬಗ್ಗೆ ಎಲ್ಲರೂ ಸಂಪರ್ಕದಲ್ಲಿದ್ದಾರೆಂದು ತಿಳಿದು ಬಂದಿದೆ.
ಟಗ್ ಅಲೈನ್ಸ್ ಮಾಲೀಕ ಮೆರೈನ್ ಮರ್ಸಂಟೈಲ್ ಡಿಪಾರ್ಟ್ಮೆಂಟ್ಗೆ ಟಗ್ ಸಮುದ್ರದಿಂದ ಎತ್ತಲು ಪರವಾನಗಿಗೆ ಅರ್ಜಿ ಹಾಕಲಾಗಿದೆ. ಅಲ್ಲಿಂದ ಸೂಚನೆ ಬಂದ ತಕ್ಷಣ ಟಗ್ಅನ್ನು ಸಮುದ್ರದಿಂದ ಮೇಲೆತ್ತುವ ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂದು ಎಂಆರ್ಪಿಎಲ್ ತಿಳಿಸಿದೆ. ಟಗ್ ಸಮುದ್ರದಲ್ಲಿ ಮುಳುಗಿದರೂ ಯಾವುದೇ ಮಾಲಿನ್ಯ ಸಂಭವಿಸಿಲ್ಲ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಮಾಲಿನ್ಯ ಸರ್ಟಿಫಿಕೇಟ್ ದೊರೆಯಲಿದೆ ಎಂದು ಎಂಆರ್ಪಿಎಲ್ ತಿಳಿಸಿದೆ.
ಇದನ್ನೂ ಓದಿ:ಉಡುಪಿ: 40 ಗಂಟೆಯಿಂದ ಸಮುದ್ರದಲ್ಲಿ ಸಿಲುಕಿದ್ದ 9 ಮಂದಿಯ ರಕ್ಷಣೆ